ಕನ್ನಡದ 'ಭುವನದ ಭಾಗ್ಯ' ದ.ರಾ. ಬೇಂದ್ರೆ
ಜಾನಪದ ಲಯ, ಗತ್ತಿನ ಮೂಲಕ ನವೋದಯ ಕಾವ್ಯ ಸಂದರ್ಭವನ್ನು ಉಚ್ಛ್ರಾಯ ಸ್ಥಿತಿಗೆ ಒಯ್ದವರು ದ.ರಾ. ಬೇಂದ್ರೆಯವರು. ಬದುಕಿನ ಸಂಘರ್ಷ, ಸಂಸಾರ, ನಿಸರ್ಗ ಹಾಗೂ ಮನುಷ್ಯನೊಬ್ಬನ ಬದುಕಿನಲ್ಲಿ ದೊರೆಯಬಹುದಾದ ಭಾವಸಂಕೀರ್ಣತೆಯನ್ನೆಲ್ಲಾ ಅನನ್ಯವಾದ ರೀತಿಯಲ್ಲಿತಮ್ಮ ಕವನಗಳಲ್ಲಿ ಕಟ್ಟಿಕೊಟ್ಟಿರುವ ಕವಿ ಬೇಂದ್ರೆ.