ಎಸ್.ಎಲ್.ಭೈರಪ್ಪ – ಒಂದು ವ್ಯಕ್ತಿ ಚಿತ್ರಣ
‘ಭೈರಪ್ಪ ಅಂದ್ರೆ ಸುಮ್ನೆ ಅಲ್ಲಪ್ಪ!’ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ 20ನೇ ಶತಮಾನವನ್ನು ಕಾದಂಬರಿಗಳ ಯುಗ ಎಂದು ಕರೆಯಲಾಗುತ್ತದೆ. ಈ ರೀತಿ ಕರೆಯಲು ಕಾರಣರಾದ ಇತರೇ ಮಹಾನುಭಾವರ ಜೊತೆಗೆ, ಇವರ ಹೆಸರೂ ಸೇರಿದೆ. ಕನ್ನಡ ಸಾಹಿತ್ಯ ಲೋಕದ ದಿಗ್ಗಜರಲ್ಲಿ ಒಬ್ಬರಾಗಿರುವ ಇವರ ಖ್ಯಾತಿ ರಾಜ್ಯಕ್ಕಷ್ಟೇ ಸೀಮಿತವಾಗಿಲ್ಲ. ಇವರ ಕೃತಿಗಳು ಭಾರತದ ಇತರೆ ಪ್ರಮುಖ ಭಾಷೆಗಳಿಗೂ ಅನುವಾದವಾಗಿದ್ದು, ಇಡೀ ದೇಶದ ಸಾಹಿತ್ಯ ವಲಯದಲ್ಲಿ ಇವರನ್ನು ಸುಪ್ರಸಿದ್ಧರಾಗಿಸಿವೆ. ಇಷ್ಟೇ ಅಲ್ಲದೆ, ಇಂಗ್ಲಿಷ್ ಭಾಷೆಗೂ ಅನುವಾದವಾಗಿರುವ