ದೇಶದಲ್ಲಿ ಕೊರೋನ ಹಾವಳಿ ಹೆಚ್ಚಾಗುತ್ತಿರುವ ಈ ಸನ್ನಿವೇಶದಲ್ಲಿ, ನಮ್ಮ ಪ್ರಾಣ ಉಳಿಸಲು ವೈದ್ಯರು ಹಗಲಿರುಳು ಶ್ರಮಿಸುತ್ತಿದ್ದಾರೆ. ವೈದ್ಯರ ಈ ಪರಿಶ್ರಮವನ್ನು ಸ್ಮರಿಸುವ ಮತ್ತು ಅವರಿಗೆ ಕೃತಜ್ಞತೆ ವ್ಯಕ್ತಪಡಿಸುವ ದಿನವೂ ಇದೇ ಸಂದರ್ಭದಲ್ಲಿ ಬಂದಿರುವುದು, ಈ ದಿನದ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿದೆ. ಹೌದು, ಇಂದು ಜುಲೈ 1, ರಾಷ್ಟ್ರೀಯ ವೈದ್ಯರ ದಿನ ಅರ್ಥಾತ್ ಡಾಕ್ಟರ್ಸ್ ಡೇ. 1991ರಿಂದ ಭಾರತದಲ್ಲಿ ವೈದ್ಯರ ದಿನಾಚರಣೆ ಆರಂಭಿಸಲಾಯಿತು. ‘Lessen the mortality of COVID19’ ಅಂದರೆ ‘ಕೋವಿಡ್ 19ರಿಂದ ಉಂಟಾಗುವ ಸಾವಿನ ಸಂಖ್ಯೆ ತಗ್ಗಿಸೋಣ’ ಅನ್ನುವುದು ಈ ಬಾರಿ ವೈದ್ಯರ ದಿನಾಚರಣೆ ಸಂದರ್ಭಕ್ಕೆ, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್(IMA) ರೂಪಿಸಿರುವ ಧ್ಯೇಯ ವಾಕ್ಯ.