ಸರ್ ಎಂ.ವಿ. ಎಂಬ ಆದರ್ಶ
ಕಾಯಕ ನಿಷ್ಠೆ, ಪ್ರಾಮಾಣಿಕತೆ ಮತ್ತು ದಕ್ಷತೆಗೆ ಹೆಸರಾಗಿದ್ದ ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ನವರು ಅತ್ಯಂತ ಚಾಣಾಕ್ಷ ಮತಿ ಇಂಜಿನಿಯರ್ ಆಗಿಯೂ ಜಗತ್ ಪ್ರಸಿದ್ಧರು. ಅವರು ಹುಟ್ಟಿದ ದಿನ ಸೆಪ್ಟೆಂಬರ್ 15 ಅನ್ನು ‘ಇಂಜಿನಿಯರ್ಸ್ ಡೇ’ ಎಂದು ಆಚರಿಸಲಾಗುತ್ತದೆ. ಈ ಮೂಲಕ ಸರ್ ಎಂ.ವಿ. ಅವರಿಗೆ ಮತ್ತು ದೇಶದ ನಿರ್ಮಾಣಕ್ಕಾಗಿ, ನಾಗರಿಕ ಸೌಕರ್ಯ, ಸೌಲಭ್ಯಗಳ ಸೃಷ್ಟಿಗಾಗಿ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡುವ ಇಂಜಿನಿಯರ್ ಗಳ ಸಮುದಾಯಕ್ಕೂ ಗೌರವ ಸಲ್ಲಿಸಲಾಗುತ್ತಿದೆ.