ಕೆಲವೇ ದಿನಗಳ ಹಿಂದೆ, ಸಿನೆಮಾ ಜಗತ್ತಿನೊಂದಿಗೆ ನಂಟು ಹೊಂದಿರುವ ಬಹುತೇಕ ಜನರು, ಈ ಸನ್ನಿವೇಶದಲ್ಲಿ OTT ವೇದಿಕೆಗಳ ಮೂಲಕ ಹೊಸ ಸಿನೆಮಾ ಬಿಡುಗಡೆ ಮಾಡುವುದು ಸರಿ ಹೋಗುತ್ತಾ?, OTT Platform ಗಳಲ್ಲಿ ಜನ ಸಿನೆಮಾ ನೋಡ್ತಾರಾ?, ಇದರಿಂದ ನಿರ್ಮಾಪಕರಿಗೆ ಲಾಭ ಆಗುತ್ತಾ?, ಇದಕ್ಕೆ ಸಿನೆಮಾ ಹಾಲ್ ನೋರು, Multiplex ಮಾಲೀಕರು ಬೇಸರ ಮಾಡ್ಕೊಳ್ಳೋದಿಲ್ವಾ? ಅಂತೆಲ್ಲ ಯೋಚನೆ ಮಾಡ್ತಿದ್ರು.

ಆದ್ರೆ, ಇದು ತನ್ನ ಅಸ್ತಿತ್ವದ ಪ್ರಶ್ನೆ ಅನ್ನುವುದನ್ನು ಅರ್ಥಮಾಡಿಕೊಂಡ ಚಿತ್ರರಂಗ, ಇದೀಗ ಮೈ ಕೊಡವಿ ಎದ್ದು ನಿಂತು, ಹೌದು ಬದಲಾವಣೆ ಜಗದ ನಿಯಮ, ನಾವೂ ಕೂಡ ಅದಕ್ಕೆ ಜೈ ಅಂತೀವಿ, OTTಗೆ ಸೈ ಅಂತೀವಿ ಅಂತ ಕೂಗು ಹಾಕ್ತಿದೆ.

5 ಹೊಸ ಬಿಡುಗಡೆಗಳ ಪೈಪೋಟಿ

ಇದೇ ಜುಲೈ ತಿಂಗಳ 30 ಮತ್ತು 31 ರಂದು 4 ಹೊಸ ಸಿನೆಮಾಗಳು ಮತ್ತು ಒಂದು ಹೊಸ ವೆಬ್ ಸರಣಿ ನೇರವಾಗಿ OTT ಮೂಲಕ ವೀಕ್ಷಕರನ್ನು ತಲುಪಲು ಸಜ್ಜಾಗಿ ನಿಂತಿವೆ.

ಇದೇ 30 ರಂದು ವಿದ್ಯುತ್ ಜಾಮ್ವಾಲ್, Amit Sadha, ವಿಜಯ್ ವರ್ಮಾ, ಕೆನ್ನಿ ಬಸುಮತಾರಿ ಜೊತೆಗೆ ಶ್ರುತಿ ಹಾಸನ್ ಮತ್ತು ಸಂಜಯ್ ಮಿಶ್ರಾ ಕೂಡ ನಟಿಸಿರುವ ಹೊಸ Crime ಡ್ರಾಮಾ ಚಿತ್ರ “ಯಾರಾ”, Zee5 ಒಟಿಟಿ ಮೂಲಕ ಪ್ರೇಕ್ಷಕರನ್ನು ತಲುಪಲಿದೆ.

ಅದಾದ ಮಾರನೆಯ ದಿನ, ಸಾಮಾನ್ಯವಾಗಿ ಸಿನೆಮಾ ಬಿಡುಗಡೆ ಕಾಣುವ ಶುಕ್ರವಾರದಂದು, ಅದರಲ್ಲೂ ಈ ಬಾರಿ ವರಮಹಾಲಕ್ಷ್ಮಿ ಹಬ್ಬದ ದಿನ ವಿದ್ಯಾಬಾಲನ್ ಅಭಿನಯದ ಶಕುಂತಲಾದೇವಿ ಸಿನೆಮಾ Amazonprime video ಮೂಲಕ ಬಿಡುಗಡೆಯಾಗಲಿದೆ. “ಶಕುಂತಲಾದೇವಿ!” ಹೆಸರು ಎಲ್ಲೋ ಕೇಳಿದ್ದೇವಲ್ಲ ಅನ್ನಿಸುತ್ತಿದೆಯೇ? ಹೌದು, ಅವರೇ ಇವರು. ಇದು, ಮಾನವ ಕಂಪ್ಯೂಟರ್ ಎಂದೇ ಪ್ರಸಿದ್ಧರಾಗಿದ್ದ ಗಣಿತಜ್ಞೆ, ಕನ್ನಡತಿ ಶಕುಂತಲಾದೇವಿ ಅವರ ಜೀವನಾಧಾರಿತ ಸಿನೆಮಾ. ಇಲ್ಲೂ ಕೂಡ, ವಿದ್ಯಾಬಾಲನ್ ಜೊತೆಗೆ ಅಮಿತ್ ಸಾದ್ಹಾ ಇದ್ದಾರೆ.

ಇದೇ ದಿನ netflix ಮೂಲಕ ರಿಲೀಸ್ ಆಗ್ತಿರೋ ಸಿನೆಮಾ ಹನಿ ಟ್ರೆಹಾನ್ ನಿರ್ದೇಶಿಸಿರುವ ನವಾಜುದ್ದೀನ್ ಸಿದ್ದಿಕಿ ಮತ್ತು ರಾಧಿಕಾ ಆಪ್ಟೆ ಅಭಿನಯದ “ರಾತ್ ಅಕೇಲಿ ಹೈ”.

ಮೂರನೆಯದಾಗಿ ತೆರೆ ಕಾಣುತ್ತಿರೋ ಸಿನೆಮಾ ಕುನಾಲ್ ಖೇಮು ಮತ್ತು ರಣ್ವೀರ್ ಶೋರೆ ಅಭಿನಯದ “ಲೂಟ್ ಕೇಸ್”. ಮಧ್ಯವಯಸ್ಕನೊಬ್ಬನಿಗೆ ಹಣದ ಕಂತೆ ತುಂಬಿರೋ ಕೆಂಪು Suitcase ಸಿಕ್ಕ ಬಳಿಕ ಏನೆಲ್ಲ ಆಗುತ್ತದೆ ಎಂಬ ಕಥೆ ಇರುವ ಈ ಸಿನೆಮಾ Disney+hotstar ಮೂಲಕ ನೋಡುಗರನ್ನು ತಲುಪಲಿದೆ.

ಬರೀ ಸಿನೆಮಾಗಳು ಮಾತ್ರ ಯಾಕೆ? ನಾವೇನು ಕಮ್ಮಿನಾ? ಅಂತ ಈ ಮೇಲಿನ ನಾಲ್ಕು ಸಿನೆಮಾಗಳ ಜೊತೆಗೆ ಪೈಪೋಟಿಗಿಳಿದು sonyliv ಮೂಲಕ ಶುಕ್ರವಾರವೇ ವೀಕ್ಷಕರನ್ನು ತಲುಪಲಿರುವ Original web Series “ಅವ್ರೋಧ್” (Avrodh).

Amit Sadha, ನೀರಜ್ ಕಾಬಿ, ದರ್ಶನ್ ಕುಮಾರ್, ಮಧುರಿಮಾ, ಅನಂತ್ ಮಹದೇವನ್, ವಿಕ್ರಮ್ ಗೋಖಲೆ ಮತ್ತು ಆರಿಫ್ ಜಕಾರಿಯಾ ಅಭಿನಯಿಸಿರುವ ಈ ವೆಬ್ ಸರಣಿ, 2016ರಲ್ಲಿ ಜಮ್ಮು-ಕಾಶ್ಮೀರದ ಉರಿ ವಲಯದ Line of Control ನಲ್ಲಿ  ಭಾರತೀಯ ಸೇನೆ ನಡೆಸಿದ Surgical strike ಅನ್ನು ವಿಭಿನ್ನ ದೃಷ್ಟಿಕೋನದಲ್ಲಿ ತೋರಿಸುವ ಪ್ರಯತ್ನ ಮಾಡಲಿದೆ.

ಉದಯೋನ್ಮುಖ ಸ್ಟಾರ್ Amit Sadha

OTTಗಳ ಮೂಲಕ ಸಿನೆಮಾಗಳು ಬಿಡುಗಡೆ ಆಗುತ್ತಿರುವ ಹೊಸ trend, ಹೊಸ ತಾರೆಗಳ ಉದಯಕ್ಕೂ ಕಾರಣವಾಗುತ್ತಿದೆ. ಈ ಮೇಲಿನ 5 ಹೊಸ ರಿಲೀಸ್ ಗಳ ಪೈಕಿ 3 ರಲ್ಲಿ ಕಾಣಿಸಿಕೊಂಡಿರುವ ನಟ Amit Sadha ಉದಯೋನ್ಮುಖ Star ಆಗಿದ್ದಾರೆ. “ಕಾಯ್ ಪೊ ಚೆ” (Kai Po Che) ಸಿನೆಮಾದಲ್ಲಿನ ಪಾತ್ರದಿಂದ ಹೆಸರಾಗಿದ್ದ ನಟ ಅಮಿತ್ ಸಾದ್ಹಾ amazon prime video ಮೂಲಕ ಇತ್ತೀಚೆಗೆ ಬಿಡುಗಡೆಯಾದ ‘Breathe: Into The Shadows’ ವೆಬ್ ಸರಣಿಯಲ್ಲಿ, ಆರ್.ಮಾಧವನ್ ಮತ್ತು ಅಭಿಷೇಕ್ ಬಚ್ಚನ್ ಜೊತೆ ಸಮರ್ಥವಾಗಿ ನಟಿಸಿ ತಮ್ಮ ಅಭಿನಯ ಸಾಮರ್ಥ್ಯವನ್ನು ನಿರೂಪಿಸಿದ್ದರು. ಈ ತಿಂಗಳು ನಾಲ್ಕು Big releaseಗಳಲ್ಲಿ ಕಾಣಿಸಿಕೊಂಡಿರುವ Amit Sadha, ಈವರೆಗಿನ ತಮ್ಮ ಸಿನೆಮಾ careerನ high ಅನ್ನಿಸುವ ದಿನಗಳಲ್ಲಿದ್ದಾರೆ. ಇತ್ತೀಚಿನ ಬಹುತೇಕ ಹೊಸ ಸಿನೆಮಾಗಳಲ್ಲಿ ನಟಿಸಿರುವ ನವಾಜುದ್ದೀನ್ ಸಿದ್ಧಿಕಿ, ಒಟಿಟಿ ಮೂಲಕ ಬಿಡುಗಡೆಯಾದ ಸಿನೆಮಾಗಳ top star ಆಗಿದ್ದಾರೆ. ಒಟ್ಟಿನಲ್ಲಿ ‘’ಇದು OTTಗಳ ಯುಗ, ಸದ್ಯಕ್ಕಂತೂ ಅವುಗಳದ್ದೇ ಇಲ್ಲಿ ರಾಜ್ಯಭಾರ’’ ಅನ್ನುವ ಮಾತು ಎಲ್ಲ ಕಡೆ ಕೇಳಿ ಬರುತ್ತಿದೆ.