ಒಲುಮೆಯ ಕವಿ ಕೆ ಎಸ್ ನ ಜೀವನ ಪ್ರೀತಿಯೇ ಕವಿತೆಯ ಸಾಲು
ನರಸಿಂಹಸ್ವಾಮಿ ಅವರ ಕವನಗಳಲ್ಲಿ ಪ್ರೇಮ, ದಾಂಪತ್ಯ, ಜನಪದ, ತತ್ವಜ್ಞಾನವನ್ನೂ ಕಾಣಬಹುದು. ಮನೆ, ದೀಪ, ಹಳ್ಳಿ, ಹೂವಿನ ಸೊಗಸು ಮತ್ತು ಅದಮ್ಯವಾದ ಜೀವನ ಪ್ರೀತಿಯನ್ನು ಸ್ಪುರಿಸುವ ಅವರ ಕವನಗಳು ಕಾವ್ಯರಸಿಕರನ್ನು ಪರವಶಗೊಳಿಸುವ ಮೋಹಕತೆಯನ್ನು ಪಡೆದುಕೊಂಡಿವೆ.