‘ಮಾಧ್ಯಮ ಅನೇಕ’ ಸಂಸ್ಥೆ ಡಾ|| ಕೆ ಎನ್ ಗಣೇಶಯ್ಯ ಅವರ ಹೊಸ ಪ್ರಯೋಗಾತ್ಮಕ ಪುಸ್ತಕ ‘ಹಾತೆ-ಜತೆ-ಕತೆ : ವಿಸ್ಮಯ ಜಗತ್ತಿನ ಕತೆಗಳು’ ಹೊರತರುವುದರ ಮೂಲಕ 2023 ಆರಂಭವನ್ನು ಆಚರಿಸುತ್ತಿದೆ. ಇದು ಮಾಧ್ಯಮ ಅನೇಕ ಪ್ರಕಾಶನದ ನಾಲ್ಕನೆಯ ಪುಸ್ತಕ.

WhatsApp Image 2023 01 02 at 11.58.25 AM

‘ಹಾತೆ-ಜತೆ-ಕತೆ’ ಗಳು ನಿಸರ್ಗದ ವಿಸ್ಮಯಗಳನ್ನು ಕತೆಗಳ ಮೂಲಕ ಹಿರಿಯರಿಗೂ, ಕಿರಿಯರಿಗೂ ವಿಶಿಷ್ಟ ರೀತಿಯಲ್ಲಿ ತಲುಪಿಸುತ್ತದೆ. ಈ ಪುಸ್ತಕವನ್ನು ಅಂಕಿತ ಪುಸ್ತಕದ ಸಹಯೋಗದಲ್ಲಿ ಮಾಧ್ಯಮ ಅನೇಕ ಹೊರತರುತ್ತಿರುವುದು ವಿಶೇಷ.

WhatsApp Image 2023 01 02 at 11.58.27 AM

ಇದೇ ದಿನ ಈ ಪುಸ್ತಕದ ಜೊತೆಗೆ ಅಂಕಿತ ಪುಸ್ತಕ ಗಣೇಶಯ್ಯನವರ ಇನ್ನೆರಡು ಪುಸ್ತಕಗಳನ್ನು – ‘ಜಲ-ಜಾಲ’ ಕಾದಂಬರಿ, ‘ಅತ್ತಿತ್ತದವಲೋಕನ’ ಲೇಖನಗಳು ಕೂಡ ಹೊರತಂದಿದೆ. ಈ ಪುಸ್ತಕಗಳಲ್ಲೂ ಗಣೇಶಯ್ಯನವರ ಬರಹ ಚಳಕದ ಮೆರಗು ಇನ್ನೊಂದು ಸ್ಥರಕ್ಕೇರಿದೆ.

WhatsApp Image 2023 01 02 at 11.58.26 AM 1

ಅಂಕಿತ ಪುಸ್ತಕದ ರೂವಾರಿ ಶ್ರೀ ಪ್ರಕಾಶ್ ಮತ್ತು ಶ್ರೀಮತಿ ಪ್ರಭಾ ಕಂಬತ್ತಳ್ಳಿ ಯವರ ನೇತೃತ್ವದಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭದ ಮುಖ್ಯ ಅತಿಥಿಯಾಗಿ ಖ್ಯಾತ ಪತ್ರಕರ್ತ-ಲೇಖಕ ಶ್ರೀ ಜೋಗಿಯವರು ಪುಸ್ತಕಗಳನ್ನು ಬಿಡುಗಡೆ ಮಾಡಿ ಪುಸ್ತಕಗಳ ಬಗ್ಗೆ ಮಾತನಾಡಿದರೆ, ಆಹ್ವಾನಿತ ಇನ್ನಿಬ್ಬರು ಗಣ್ಯ ಲೇಖಕರು ಶ್ರೀ ಎಂ ಆರ್ ದತ್ತಾತ್ರಿ, ಮತ್ತು ಶ್ರೀ ಕರ್ಕಿ ಕೃಷ್ಣಮೂರ್ತಿ ಮೂರೂ ಪುಸ್ತಕಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ಶ್ರೀ ಪ್ರಕಾಶ್ ರವರ ನಿರ್ವಹಣೆ ಕಾರ್ಯಕ್ರಮದ ಘನತೆಯನ್ನು ಹೆಚ್ಚಿಸಿತ್ತು.

WhatsApp Image 2023 01 02 at 11.58.26 AM

ಎರಡು ಪ್ರಕಾಶನ ಸಂಸ್ಥೆಗಳು ಜೊತೆಯಾಗಿ ವಿಶಿಷ್ಟ ಪುಸ್ತಕವೊಂದನ್ನು ಹೊರತರುತ್ತಿರುವ ಅತಿ ಅಪರೂಪದ
ಈ ಸುಂದರ ಸಾಹಿತ್ಯ ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಿದ ಗಣ್ಯ ಅತಿಥಿಗಳನ್ನೂ, ಭಾಗವಹಿಸಿದ ಎಲ್ಲ ಓದುಗ ಬಳಗವನ್ನೂ, ಸಾಹಿತ್ಯಾಭಿಮಾನಿಗಳನ್ನೂ ಮಾಧ್ಯಮ ಅನೇಕ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತದೆ.

WhatsApp Image 2023 01 02 at 11.58.25 AM 1 1

ಪುಸ್ತಕ ಕೊಳ್ಳಲು ಸಂಪರ್ಕಿಸಿ :
ಅಂಕಿತ ಪುಸ್ತಕ
Ph: 080-2661 7100 / 2661 7755
www.ankitapustaka.com

Online/Amazon
ಹಾತೆ-ಜತೆ-ಕತೆ : ವಿಸ್ಮಯ ಜಗತ್ತಿನ ಕಥೆಗಳು https://amzn.eu/d/b02ovv6