ಕರಗಿದ ಕೊರೋನಾ ಕಾರ್ಮೋಡ; ಚಿತ್ರರಂಗದಲ್ಲಿ ಹೊಸ ಬೆಳಕು
ಮತ್ತೆ ಬಾಗಿಲು ತೆರೆದ ಚಿತ್ರಮಂದಿರಗಳು ಕೊರೋನಾ ಮಹಾಮಾರಿಯ ಹಾವಳಿಯಿಂದ ದೇಶಾದ್ಯಂತ ಸುಮಾರು 7 ತಿಂಗಳ ಕಾಲ ಚಿತ್ರಮಂದಿರಗಳು ಬಾಗಿಲು ಮುಚ್ಚಿದ್ದವು. ಆ ಬಳಿಕ ಅಕ್ಟೋಬರ್ 1 ರಂದು Unlock 5.0 ಮಾರ್ಗಸೂಚಿ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ ಅಕ್ಟೋಬರ್ 15 ರಿಂದ ಚಿತ್ರಮಂದಿರಗಳು ಮತ್ತು Multiplexಗಳನ್ನು ತೆರೆಯಲು ಅನುಮತಿ ನೀಡಿತ್ತು. ಕಟ್ಟುನಿಟ್ಟಿನ ಸುರಕ್ಷತಾ ಕ್ರಮಗಳು ಮತ್ತು ಸೀಟಿಂಗ್ ಸಾಮರ್ಥ್ಯದ ಶೇಕಡ 50 ರಷ್ಟು ವೀಕ್ಷಕರಿಗೆ ಮಾತ್ರ ಅವಕಾಶ ನೀಡುವ ನಿಯಮ