ಬೆಂಗಳೂರು ಮೂಲದ ಮೀಡಿಯಾ ಪ್ರೊಡಕ್ಷನ್ ಹೌಸ್ “ಮಾಧ್ಯಮ ಅನೇಕ ಪ್ರೈ. ಲಿ.” ಇದೀಗ ವೆಬ್ ಮನರಂಜನಾ ಕ್ಷೇತ್ರವನ್ನು (Web Entertainment segment) ಪ್ರವೇಶಿಸುತ್ತಿದೆ.  ಮಾಧ್ಯಮ ಅನೇಕ  “ಸೂಪರ್ ಕಪಲ್” ಎಂಬ ಶೀರ್ಷಿಕೆಯ ಮೊದಲ ವೆಬ್ ಸೀರೀಸ್ (Web Series) ಅನ್ನು ಕನ್ನಡ ಭಾಷೆಯಲ್ಲಿ ತೆರೆಗೆ ತರುತ್ತಿದೆ. “ಸೂಪರ್ ಕಪಲ್”- ಮಾಡರ್ನ್ ಲೈಫ್ ಸ್ಟೈಲ್ ಅನುಸರಿಸುತ್ತಿರುವ ಯುವ ಜೋಡಿ ಈಶ್ವರ್ ಮತ್ತು ಶಾರ್ವರಿಯ ನಿತ್ಯ ಬದುಕಿನ ಸನ್ನಿವೇಶಗಳಲ್ಲಿ ಕಂಡುಬರುವ ಸ್ವಾರಸ್ಯಕರ ಹಾಸ್ಯ ಪ್ರಸಂಗಗಳು. ಕಚ್ಚಾಟ, ಕಿರುಚಾಟಗಳಿಲ್ಲದಂತೆ, ದ್ವಂದ್ವಾರ್ಥಗಳ ಮುಜುಗರಗಳಿಲ್ಲದ, ಸದಭಿರುಚಿಯ ಸಂಭಾಷಣೆಯುಳ್ಳ, ಮನೆಯವರೆಲ್ಲ ಒಟ್ಟಿಗೆ ಕುಳಿತು ನೋಡುವಂಥ ಒಂದು ವೆಬ್ ಸೀರೀಸ್.

2018ರಲ್ಲಿ ತನ್ನ ಕಾರ್ಯಚಟುವಟಿಕೆಗಳನ್ನು ಆರಂಭಿಸಿದ “ಮಾಧ್ಯಮ ಅನೇಕ’’ ಮೌಲ್ಯಯುತವಾದ, ಹೊಸತನ ಹಾಗೂ ಉತ್ತಮ ಗುಣಮಟ್ಟದಿಂದ ಕೂಡಿದ ಮಾಹಿತಿ ಮತ್ತು  ಮನರಂಜನಾ ಕಾರ್ಯಕ್ರಮಗಳನ್ನು ನಿರ್ಮಿಸುವ ಆಶಯ ಹೊಂದಿದೆ. ಮೀಡಿಯ ಹೌಸ್ ಆಗಿ ಕ್ರಿಯಾಶೀಲವಾಗಿರುವ ಕಳೆದ ಎರಡು ವರ್ಷಗಳಿಗೂ ಹೆಚ್ಚಿನ ಪ್ರಯಾಣದಲ್ಲಿ ಕನ್ನಡ ಭಾಷೆಯಲ್ಲಿ ಸಾಕ್ಷ್ಯಚಿತ್ರಗಳು (Documentary), ಸಂದರ್ಶನಗಳು (Web Interviews), ಮತ್ತು ವೆಬ್ ಆಧಾರಿತ ಮನರಂಜನಾ ಕಾರ್ಯಕ್ರಮಗಳನ್ನು “ಮಾಧ್ಯಮ ಅನೇಕ” ನಿರ್ಮಿಸುತ್ತಾ ಬಂದಿದೆ.

ಪ್ರಾದೇಶಿಕ ಭಾಷೆಗಳ ವೆಬ್ ಎಂಟರ್ಟೈನ್ಮೆಂಟ್ ಕಂಟೆಂಟ್ (Web Entertainment Content)

2020ರಲ್ಲಿ ಇಡೀ ಜಗತ್ತಿನಲ್ಲಿ ಉಂಟಾದ ಕೊರೋನ ಸನ್ನಿವೇಶದಲ್ಲಿನ ಲಾಕ್  ಡೌನ್ ಕಾರಣದಿಂದ ದೇಶಾದ್ಯಂತ ಸಿನೆಮಾ ಹಾಲ್ ಗಳು ಮತ್ತು Multiplexಗಳು ಸುಮಾರು 8 ತಿಂಗಳ ಕಾಲ ಬಾಗಿಲು ಮುಚ್ಚಿದ್ದವು. ಈ ಸಂದರ್ಭದಲ್ಲಿ ಹೊಸ ಸಿನೆಮಾ, ವೆಬ್ ಸೀರೀಸ್ ಇತ್ಯಾದಿ ಮನರಂಜನಾ ಕಾರ್ಯಕ್ರಮಗಳು OTT ವೇದಿಕೆಗಳ ಮೂಲಕವೇ Digital Streaming ದಾರಿಯಲ್ಲಿ ನೇರವಾಗಿ ನೋಡುಗರಿಗೆ ತಲುಪಲು ಆರಂಭಿಸಿದವು.

Netflix, Amazon Prime Video, Disney+ Hotstar ನಂಥ OTT ವೇದಿಕೆಗಳು, ಹಿಂದಿ ಮತ್ತು ಇತರೆ ಸ್ಥಳೀಯ ಭಾಷೆಗಳಲ್ಲೂ ಹೊಸ ಸಿನೆಮಾ, ವೆಬ್ ಸೀರೀಸ್ ಇತ್ಯಾದಿಗಳನ್ನು ನಿರ್ಮಿಸುವುದರ ಜೊತೆಗೆ ಇತರೆ ನಿರ್ಮಾಪಕರಿಂದ ಖರೀದಿಸಿ ವೀಕ್ಷಕರಿಗೆ ತಲುಪಿಸುವ ಕೆಲಸ ಪ್ರಾರಂಭಿಸಿದವು. ಈ ಹಿಂದೆ, 2017ರಲ್ಲಿ ಆರಂಭವಾದ ಬಂಗಾಳಿ ಭಾಷೆಯ OTT ವೇದಿಕೆ Hoichoi ಈ ವಿಚಾರದಲ್ಲಿ ಬೇರೆಲ್ಲರಿಗಿಂತ ಮುಂದಿತ್ತು. ಅಲ್ಲಿಂದೀಚೆಗಿನ ಮೂರು ವರ್ಷಗಳಲ್ಲಿ ತೆಲುಗು, ಮಲೆಯಾಳಮ್ ಮತ್ತು ಮರಾಠಿ ಭಾಷೆಗೆ ಮೀಸಲಾದ OTT ವೇದಿಕೆಗಳು ಅಸ್ತಿತ್ವಕ್ಕೆ ಬಂದಿವೆ. ತೆಲುಗು ಸಿನೆಮಾ ಮತ್ತು ವೆಬ್ ಸೀರೀಸ್ ಗಳಿಗೆ ಮೀಸಲಾದ OTT ವೇದಿಕೆ Aha, ತೆಲುಗು, ಕೊಂಕಣಿ ಮತ್ತು ಕನ್ನಡದ ಕಾರ್ಯಕ್ರಮಗಳನ್ನು ತೋರಿಸುವ Talkies ಮತ್ತು ಮರಾಠಿ ಭಾಷಿಕರಿಗಾಗಿ Planet Marathi OTT ಗಳೆಲ್ಲವೂ 2020ರಲ್ಲಿ ಆರಂಭಿಸಲ್ಪಟ್ಟವು. ಹಲವಾರು ಹೆಸರಾಂತ ಪ್ರೊಡಕ್ಷನ್ ಹೌಸ್ ಗಳೂ ಕೂಡ ಸ್ಥಳೀಯ ಭಾಷೆಗಳ ಕಡೆಗೆ ಹೆಚ್ಚಿನ ಗಮನ ನೀಡಲು ಆರಂಭಿಸಿದವು.

ಕನ್ನಡ ಭಾಷೆಯಲ್ಲಿ ವೆಬ್ ಎಂಟರ್ಟೈನ್ಮೆಂಟ್ ಕಂಟೆಂಟ್ (Web Entertainment Content)

ಭಾರತದ ಹಲವಾರು ಪ್ರಾದೇಶಿಕ ಭಾಷೆಗಳಿಗೆ ಸಂಬಂಧಿಸಿದಂತೆ OTT ವೇದಿಕೆಗಳಲ್ಲಿ ಇಷ್ಟೆಲ್ಲ ಬೆಳವಣಿಗೆಗಳಾದರೂ ಕೂಡ, ಕನ್ನಡಕ್ಕೆ ಮೀಸಲಾಗಿರುವಂಥ ಮತ್ತು ಕನ್ನಡ ಭಾಷೆಯ ಮೂಲ ಕಾರ್ಯಕ್ರಮಗಳನ್ನು(Kannada language original content) ವೀಕ್ಷಕರಿಗೆ ತಲುಪಿಸುವ ಕನ್ನಡ ನೆಲದ್ದೇ ಆಗಿರುವ OTT ವೇದಿಕೆ ಆರಂಭವಾಗಿಲ್ಲ.

Netflix, Amazon Prime Video, Disney+ Hotstar ನಂಥ ಹೆಸರುವಾಸಿಯಾಗಿರುವ OTT ವೇದಿಕೆಗಳು, 6 ಕೋಟಿಗೂ ಹೆಚ್ಚು ಜನರು ಮಾತನಾಡುವ ಕನ್ನಡ ಭಾಷೆಯ ಬಗ್ಗೆ ಯಾವುದೇ ಪ್ರೀತಿ ಮತ್ತು ಆಸಕ್ತಿ ತೋರಿಸದೇ ಇರುವ ವಿಚಾರ ಕೂಡ ಆಶ್ಚರ್ಯಕರ ಅನ್ನಿಸಿದರೂ ಸತ್ಯ.  ಇದರಿಂದ ಕನ್ನಡ ವೆಬ್ ಮನರಂಜನಾ (Web Entertainment) ವಲಯದಲ್ಲಿ ದೊಡ್ಡ ಕೊರತೆ ಉಧ್ಭವಿಸಿದೆ.

OTT ವೇದಿಕೆಯಲ್ಲಿ ಕನ್ನಡ ಭಾಷೆಗೆ ಸಂಬಂಧಿಸಿದಂತೆ ಉಂಟಾಗಿರುವ ಈ ಕೊರತೆಯನ್ನು ಗಮನಿಸಿ, ಅರ್ಥೈಸಿಕೊಂಡಿರುವ ಮಾಧ್ಯಮ ಅನೇಕ ಸಂಸ್ಥೆ ಇದರಿಂದ ಸೃಷ್ಟಿ ಆಗಿರುವ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಲು ಮುಂದಾಗಿದೆ. ಇದೇ ಕಾರಣಕ್ಕಾಗಿ, 2020ರಲ್ಲಿ ವೆಬ್ ಪ್ಲಾಟ್ ಫಾರಂಗಳಿಗೆ (Web Platforms) ಮಾರ್ಗಸೂಚಿಯಾಗಬಲ್ಲಂಥ ಮನರಂಜನಾ ಕಾರ್ಯಕ್ರಮಗಳನ್ನು(Entertainment content)  ನಿರ್ಮಿಸುವತ್ತ “ಮಾಧ್ಯಮ ಅನೇಕ” ದೃಷ್ಟಿ ಹರಿಸಿದೆ. OTTಗಳ ಮೂಲಕ ತಲುಪಬಲ್ಲ ಕಾರ್ಯಕ್ರಮಗಳಿಗೆ ಅಪಾರ ಬೇಡಿಕೆ ಇದ್ದು, ಅದನ್ನು ಪೂರೈಸಬಲ್ಲ ನಿರ್ಮಾಪಕರ ಕೊರತೆ ಎದುರಾಗಿರುವ ಇಂಥ ಸನ್ನಿವೇಶದಲ್ಲೇ ತಾನು Web Entertainment ಕ್ಷೇತ್ರವನ್ನು ಪ್ರವೇಶಿಸುತ್ತಿರುವುದಾಗಿ “ಮಾಧ್ಯಮ ಅನೇಕ” ಪ್ರಕಟಿಸಿದೆ.