‘ಪ್ರತಿಯೊಂದು ಕ್ರಿಯೆಗೂ ಅದಕ್ಕೆ ಸಮವಾದ ಮತ್ತು ವಿರುದ್ಧವಾದ ಪ್ರತಿಕ್ರಿಯೆ ಇದ್ದೇ ಇರುತ್ತದೆ’ ಎಂಬ ವಿಜ್ಞಾನಿ ನ್ಯೂಟನ್ ಅವರ ನಿಯಮ ಜಗತ್ ಪ್ರಸಿದ್ಧ. ಹೀಗಿರುವಾಗ, ಹೊಸ ಸಿನೆಮಾಗಳನ್ನು Digital Platform ಮೂಲಕ ನೇರವಾಗಿ ವೀಕ್ಷಕರಿಗೆ ತಲುಪಿಸುವ  ಸಿನೆಮಾ ನಿರ್ಮಾಪಕರ ನಿರ್ಧಾರಕ್ಕೆ Exhibitors ಅಂದರೆ ಚಿತ್ರಮಂದಿರಗಳು, PVR ಹಾಗೂ INNOX ನಂಥ MULTIPLEXಗಳ ಮಾಲೀಕರು ಪ್ರತಿಕ್ರಿಯೆ ವ್ಯಕ್ತಪಡಿಸದಿರುವುದೇ ಇರುವುದು ಹೇಗೆ ಸಾಧ್ಯ? ಏಕೆಂದರೆ ಇದು ಅವರ ಅಳಿವು ಉಳಿವಿನ ಪ್ರಶ್ನೆಯೂ ಆಗಿದೆಯಲ್ಲವೇ?

ಹೀಗಾಗಿ, ಸದ್ಯಕ್ಕೆ Digital First ಅನ್ನುತ್ತಿರುವ ಸಿನೆಮಾ ನಿರ್ಮಾಪಕರ ನಿಲುವಿಗೆ ದೇಶಾದ್ಯಂತ ಥಿಯೇಟರ್ ಮಾಲೀಕರು ಅಪಸ್ವರ ಎತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ನಿರ್ಮಾಪಕರ ವಲಯ, ದೇಶದೆಲ್ಲೆಡೆ Unlock ಆರಂಭವಾಗಿದೆ, ದೊಡ್ಡ ದೊಡ್ಡ ಮಾಲ್ ಗಳು ಓಪನ್ ಆಗುತ್ತಿವೆ. ಇದೇ ಸಂದರ್ಭದಲ್ಲಿ ಸಿನೆಮಾ ಹಾಲ್ ಗಳು ಮತ್ತು MULTIPLEXಗಳೂ ಕೂಡ ವೀಕ್ಷಕರ ಸುರಕ್ಷತೆ ಕಾಪಾಡಲು ಕೈಗೊಳ್ಳಬೇಕಾದ ಎಲ್ಲ ಕ್ರಮಗಳೊಂದಿಗೆ ಪುನಾರಂಭಗೊಳ್ಳಲು ಕಾಯುತ್ತಿವೆ. ಹೀಗಿರುವಾಗ, ಹೊಸ ಸಿನೆಮಾಗಳನ್ನು ಡಿಜಿಟಲ್ ಮಾಧ್ಯಮದ ಮೂಲಕ ಬಿಡುಗಡೆ ಮಾಡುವುದು ಸರಿಯಲ್ಲ ಎಂದು ಅಸಂತೋಷ ವ್ಯಕ್ತ ಪಡಿಸಿದ್ದಾರೆ.

Big Screen ಮೇಲೆ ಪ್ರದರ್ಶನ ಮಾಡುವ ಉದ್ದೇಶದಿಂದಲೇ ಸಿನೆಮಾಗಳನ್ನು ತಯಾರಿಸಲಾಗುತ್ತದೆ. ಹೀಗಾಗಿ, ಇಂಥ ಸಮಯದಲ್ಲಿ ಸಿನೆಮಾ ನಿರ್ಮಾಪಕರು, ನಮ್ಮಲ್ಲಿ ನಂಬಿಕೆ ಇಡಬೇಕು ಮತ್ತು ತಾಳ್ಮೆ ವಹಿಸಬೇಕು ಅನ್ನುವುದು ಪ್ರದರ್ಶಕರ ವಲಯದ ಆಗ್ರಹ.  

ಇದಲ್ಲದೆ Digital Platformಗಳ ಮೂಲಕ ನೇರವಾಗಿ ಸಿನೆಮಾ ಬಿಡುಗಡೆ ಮಾಡಿದರೆ ಅದು Entertainment Industryಯ ಅಭಿವೃದ್ಧಿಗೆ ತಡೆಯೊಡ್ಡುತ್ತದೆ ಎಂದೂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಳೆದ ತಿಂಗಳು ಅಮಿತಾಬ್ ಬಚ್ಚನ್ ಮತ್ತು ಆಯುಷ್ಮಾನ್ ಖುರಾನ ಅಭಿನಯದ ಗುಲಾಬೊ ಸಿತಾಬೊ ಮತ್ತು ವಿದ್ಯಾಬಾಲನ್ ನಟನೆಯ ಶಂಕುಂತಲಾ ದೇವಿ ಸಿನೆಮಾಗಳು Amazon Prime Video ದಲ್ಲಿ

ಬಿಡುಗಡೆಯಾಗಲಿವೆ ಎಂದು ಪ್ರಕಟಿಸಿದಾಗಲೇ OTT V/S Theatre Owners ಯುದ್ಧ ಆರಂಭವಾಗಿತ್ತು. ಈ ರೀತಿ ಮಾಡುವುದು, ಇಡೀ ಜಗತ್ತಿನಲ್ಲಿ ಸಿನೆಮಾ ರಂಗ ಅನುಸರಿಸಲಾಗುತ್ತಿರುವ ರೀತಿ ನೀತಿಗಳಿಗೆ ವಿರುದ್ಧ ಎಂದು, ದೇಶಾದ್ಯಂತ Multiplex ಸಿನೆಮಾಹಾಲ್ ಗಳನ್ನು ಹೊಂದಿರುವ INOX ನವರು ಅಸಮಾಧಾನ ವ್ಯಕ್ತಪಡಿಸಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ್ದ Producers Guild ನವರು, ನಾವು ಹಿಂದೆಂದೂ ಕಾಣದಂಥ ಆರೋಗ್ಯ ಮತ್ತು ಆರ್ಥಿಕ ತುರ್ತುಪರಿಸ್ಥಿತಿ ಎದುರಿಸುತ್ತಿದ್ದೇವೆ. ಸಿನೆಮಾ ನಿರ್ಮಾಪಕರು, ವಿತರಕರು, ಪ್ರದರ್ಶಕರು, ತಂತ್ರಜ್ಞರು ಮತ್ತು ಸಿನೆಮಾ ಉದ್ಯಮದ ಮೇಲೆ ಅವಲಂಬಿತರಾಗಿರುವ ಸಾವಿರಾರು ಜನ, ಸಂಕಷ್ಟ ಎದುರಿಸುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಎಲ್ಲರೂ ಒಗ್ಗಟ್ಟಿನಿಂದಿರಬೇಕು ಮತ್ತು ಪರಸ್ಪರ ಸಹಾನುಭೂತಿ ಹೊಂದಿರಬೇಕು. ಆದರೆ, ಪ್ರದರ್ಶಕರ ವಲಯದಿಂದ ಬರುತ್ತಿರುವ ಹೇಳಿಕೆಗಳು ನಿರಾಶಾದಾಯವಾಗಿವೆ ಎಂದು ಕಿಡಿಕಾರಿದ್ದರು.

ಇದೇ ವಿಚಾರದ ಬಗ್ಗೆ ‘Bollywood ki home delivery’ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ನಟ ಅಕ್ಷಯ್ ಕುಮಾರ್, ಸಿನೆಮಾಗಳನ್ನು ಪ್ರದರ್ಶಿಸುವುದು ಚಿತ್ರಮಂದಿರಗಳ ಆ ಜನ್ಮಸಿದ್ಧ ಹಕ್ಕು. ಆದರೆ, ಈಗಿನ ಪರಿಸ್ಥಿತಿಯಲ್ಲಿ Cinema Hallಗಳನ್ನು ಓಪನ್ ಮಾಡಲಾಗದ್ದರ ಬಗ್ಗೆ ನನಗೆ ದುಃಖವಿದೆ ಎಂದು ಹೇಳಿದ್ದರು. Disney+Hotstar ಮೂಲಕ ಬಿಡುಗಡೆ ಆಗುತ್ತಿರುವ ನನ್ನ ಸಿನೆಮಾ ಲಕ್ಷಾಂತರ ವೀಕ್ಷಕರನ್ನು ತಲುಪಿ ಅವರಿಗೆ ಸಂತೋಷ ಕೊಡುವುದೂ ಕೂಡ ನನಗೆ ಖುಷಿ ತರುತ್ತದೆ ಎಂದು ಅಕ್ಷಯ್ ಕುಮಾರ್ ಹೇಳಿದ್ದರು.

ಇದೇ ವೇಳೆ ಮಾತನಾಡಿದ್ದ  Disney+Hotstar ಮುಖ್ಯಸ್ಥ ಉದಯ್ ಶಂಕರ್, ‘ಸಿನೆಮಾದ ಮೇಲಿನ ಹಕ್ಕು, ಅದನ್ನು ನೋಡುವ ವೀಕ್ಷಕರದ್ದೇ ಹೊರತು ಬೇರೆ ಯಾರದ್ದೂ ಅಲ್ಲ’ ಎಂದಿದ್ದರು.

Disney+Hotstar, Netflix, Amazon Prime, Hulu ಮತ್ತು ALT Balaji ಯಂಥ Over the Top platformಗಳ ಮೂಲಕ ಸಿನೆಮಾ ಬಿಡುಗಡೆಯಾದಲ್ಲಿ ನೋಡುಗರ ಹವ್ಯಾಸ ಬದಲಾಗಿಬಿಡುತ್ತದೆ. ಮುಂದಿನ ದಿನಗಳಲ್ಲಿ ಚಿತ್ರಮಂದಿರಗಳು ಮತ್ತು Multiplex ಗಳಿಗೆ ಬಂದು ಸಿನೆಮಾ ನೋಡುವವರ ಸಂಖ್ಯೆ ಇಳಿಮುಖವಾಗಿಬಿಡುತ್ತದೆ ಎಂಬ ವಾದ ತಿರಸ್ಕರಿಸಿದ ಉದಯ್ ಶಂಕರ್, ಈ ಹಿಂದೆ ಟಿವಿಗಳಲ್ಲಿ ಸಿನೆಮಾಗಳನ್ನು ಪ್ರಸಾರ ಮಾಡಲು ಆರಂಭಿಸಿದಾಗಲೂ ಇದೇ ಮಾತು ಕೇಳಿಬಂದಿತ್ತು, ಆದರೆ ಹಾಗೇನೂ ಆಗಲಿಲ್ಲ, ದೇಶದಲ್ಲಿ ಸಿನೆಮಾ ಹಾಲ್ ಗಳ ಸಂಖ್ಯೆ ಹೆಚ್ಚಾಯಿತು, ಸಿನೆಮಾ ಉದ್ಯಮದ ಆದಾಯವೂ ಹೆಚ್ಚಾಯಿತು ಎಂದು ಅಭಿಪ್ರಾಯ ಪಟ್ಟರು. ಸಿನೆಮಾಗಳ ಡಿಜಿಟಲ್ ಪ್ರದರ್ಶನದಿಂದ ಚಿತ್ರೋದ್ಯಮಕ್ಕೆ ಹೊಸ ಜೀವ ಸಿಗುತ್ತದೆ ಮತ್ತು ಈ Digital Platformಗಳು ಸಂಪೂರ್ಣ ಹೊಸ ಜಗತ್ತನ್ನೇ ಸೃಷ್ಟಿಸುತ್ತವೆ ಎಂಬ ಭರವಸೆಯನ್ನೂ ಉದಯ್ ಶಂಕರ್ ವ್ಯಕ್ತಪಡಿಸಿದರು.

ಈ ಎಲ್ಲ ಹೊಸ ಬೆಳವಣಿಗೆಗಳ ನಡುವೆ ಹಿರಿಯ ನಿರ್ದೇಶಕ ಶ್ಯಾಮ್ ಬೆನೆಗಲ್ ಅವರೂ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಬೆಳ್ಳಿತೆರೆ ಅಥವ ದೊಡ್ಡ ಪರದೆ ಮೇಲೆ ಪ್ರದರ್ಶನಗೊಳ್ಳುವ ಸಿನೆಮಾ, ವೀಕ್ಷಕರಿಗೆ Larger than Life ರೀತಿಯ ಅಸಾಮಾನ್ಯ ಅನುಭವ ನೀಡುತ್ತದೆ. TVಅಥವ OTT Platformಗಳಲ್ಲಿ ಇಂಥ ಅನುಭವ ಸಿಗುವುದಿಲ್ಲ. ಇವತ್ತು ಹಲವಾರು ಮಾಧ್ಯಮಗಳಲ್ಲಿ ಸಿನೆಮಾ ನೋಡಲು ಸಾಧ್ಯವಿದ್ದರೂ ಕೂಡ, ಚಿತ್ರಮಂದಿರಗಳಿಗೆ ಹೋಗುವುದು ಒಂದು Social occasion ಆಗಿರುತ್ತದೆ. ಹೀಗಾಗಿ, ಅದೊಂದು ವಿಭಿನ್ನ ಆಯಾಮವನ್ನು ಮತ್ತು ಜೊತೆಯಾಗಿ ಸಿನೆಮಾ ನೋಡುವ ಅನುಭವವನ್ನೂ ನೀಡುತ್ತದೆ. ಇಂಥ ಅನುಭವ OTT Platformಗಳು ನೀಡಲು ಸಾಧ್ಯವಿಲ್ಲ ಅನ್ನುವುದು ಶ್ಯಾಮ್ ಬೆನೆಗಲ್ ಅವರ ಅಭಿಪ್ರಾಯ.

ಏಕ್ ಥಾ ಟೈಗರ್ ಮತ್ತು ಭಜರಂಗಿ ಭಾಯಿಜಾನ್ ಮುಂತಾದ ಸಿನೆಮಾಗಳ ನಿರ್ದೇಶಕ ಕಬೀರ್ ಖಾನ್ ಅವರೂ ಕೂಡ ಶ್ಯಾಮ್ ಬೆನೆಗಲ್ ಅವರ ಮಾತುಗಳನ್ನು ಪ್ರತಿಫಲಿಸುತ್ತಾರೆ. ಟಿವಿಗಳಲ್ಲಿ ಸಿನೆಮಾ ತೋರಿಸಲು ಆರಂಭವಾದಾಗ, VCRಗಳ ಬಳಕೆ ಶುರುವಾದಾಗ ಮತ್ತು DVDಗಳು ಸಿಗಲಾರಂಭಿಸಿದ ದಿನಗಳಲ್ಲೂ ಕೂಡ, ಇನ್ನುಮುಂದೆ ಜನರು Cinema Hallಗಳಿಗೆ ಹೋಗುವುದಿಲ್ಲವೇನೋ ಅನ್ನುವ ಮಾತುಗಳು ಕೇಳಿ ಬಂದಿದ್ದವು ಆದರೆ ಹಾಗಾಗಲಿಲ್ಲ ಅನ್ನುವ ಕಬೀರ್ ಖಾನ್, ‘ನಾವು ಕತ್ತಲಿನಲ್ಲಿರುವ ಸಿನೆಮಾ ಹಾಲ್ ಪ್ರವೇಶಿಸಿ, ಇತರೆ ನಾಲ್ಕುನೂರು ಜನರೊಂದಿಗೆ ಕುಳಿತು ಸಿನೆಮಾ ನೋಡುವುದು, ಒಂದು ರೀತಿಯ ಮಾಂತ್ರಿಕ ಅನುಭವ ನೀಡುತ್ತದೆ. ಇಂಥ ಅನುಭವ ಯಾವತ್ತಿಗೂ ಮಾಯವಾಗಲು ಸಾಧ್ಯವಿಲ್ಲ’ ಅನ್ನುತ್ತಾರೆ.

ಕೊರೋನ Pandemicನಿಂದ ಉಂಟಾಗಿರುವ ಈ ಸನ್ನಿವೇಶದಲ್ಲಿ ಹೊಸ ಸಿನೆಮಾಗಳು OTT platformನಲ್ಲಿ ಬಿಡುಗಡೆ ಆಗುವುದು ಕೇವಲ ಒಂದು ತಾತ್ಕಾಲಿಕ ಬೆಳವಣಿಗೆ ಎನ್ನುವ Carnival Cinemasನ CEO ಮೋಹನ್ ಉಮ್ರೋಟ್ಕರ್, Digital Platformಗಳು ನಿರ್ಮಾಪಕರಿಗೆ ತಂದುಕೊಡುವ ಆದಾಯಕ್ಕಿಂತಲೂ ಸಿನೆಮಾ ಹಾಲ್ ಗಳಲ್ಲಿ ಬಿಡುಗಡೆ ಮಾಡುವ ಸಿನೆಮಾಗಳು ಹೆಚ್ಚಿನ ಆದಾಯ ತಂದುಕೊಡುತ್ತವೆ ಅನ್ನುವುದನ್ನು ಮರೆಯಬಾರದು ಎಂದು ನೆನಪಿಸುತ್ತಾರೆ.

ಒಟ್ಟಿನಲ್ಲಿ, ಇಡೀ ದೇಶದಲ್ಲಿ ಕೊರೋನ ಹಾವಳಿ ನಡೆಸುತ್ತಿರುವ ಈ ಸನ್ನಿವೇಶದಲ್ಲಿ ಲಕ್ಷಾಂತರ ವೀಕ್ಷಕರನ್ನು ತಲುಪಲು OTT platformಗಳಿಗೆ ಇದೊಂದು ಸುವರ್ಣಾವಕಾಶ. ಆದರೆ, ಮುಂದಿನ ದಿನಗಳಲ್ಲಿ Cinema Hallಗಳು, Multiplexಗಳು ಮತ್ತು Digital Platformಗಳೆಲ್ಲವೂ ಸಹಬಾಳ್ವೆ ನಡೆಸುವ ಮಾರ್ಗ ಕಂಡು ಹಿಡಿದುಕೊಳ್ಳಬೇಕಾಗುತ್ತದೆ ಅನ್ನುವುದೇ ಇಲ್ಲಿ ಅಂತಿಮ ಸತ್ಯ.

ಸದ್ಯಕ್ಕೆ, ಭಾರತೀಯ ಚಿತ್ರರಂಗವೂ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ, ವಿಜ್ಞಾನಿ ಚಾರ್ಲ್ಸ್ ಡಾರ್ವಿನ್ ಅವರು ತಮ್ಮ ವಿಕಾಸವಾದದಲ್ಲಿ ಪ್ರತಿಪಾದಿಸಿದ Survival of the Fittest ಅನ್ನುವ ಮಾತೇ ಗಟ್ಟಿಯಾಗಿ ಕೇಳಿಸುತ್ತಿದೆ, ಕಾಣಿಸುತ್ತಿದೆ!