‘ವೈದೇಹಿ’ ಎಂಬ ಹೂ ಮನದ ಲೇಖಕಿ
-ಡಾ. ಎಚ್.ಎಸ್. ಸತ್ಯನಾರಾಯಣ ಭಾರತೀಯ ಸಾಹಿತ್ಯ ನಿರ್ಮಾತೃಗಳಲ್ಲಿ ವೈದೇಹಿಯವರಿಗೆ ಗಣ್ಯ ಸ್ಥಾನವಿದೆ. ಸಣ್ಣಕಥೆ ಇವರ ಮುಖ್ಯ ಅಭಿವ್ಯಕ್ತಿ ಮಾಧ್ಯಮವಾದರೂ ಕಾದಂಬರಿ, ಲಲಿತ ಪ್ರಬಂಧ, ಮಕ್ಕಳ ಸಾಹಿತ್ಯ, ನಾಟಕಗಳು, ಕಾವ್ಯ, ನೆನಪುಗಳ ಸಂಗ್ರಹ ಮುಂತಾದ ಪ್ರಕಾರಗಳಲ್ಲಿ ಕೃಷಿ ಮಾಡಿರುವ ಗಟ್ಟಿ ಹಾಗೂ ದಿಟ್ಟ ದನಿಯ ಲೇಖಕಿ ಇವರಾಗಿದ್ದಾರೆ. ವಿದ್ಯಾರ್ಥಿ ದಿಸೆಯಲ್ಲಿಯೇ ಕಥೆ ಬರೆಯುವ ಸದಭಿರುಚಿಗೆ ತೆರೆದುಕೊಂಡ ವೈದೇಹಿಯವರ ಲೇಖನಿಯು ಕಳೆದ ಐದು ದಶಕಗಳ ಅವಧಿಯಲ್ಲಿ ಕನ್ನಡ ಸಾರಸ್ವತ ಲೋಕಕ್ಕೆ ಅಮೂಲ್ಯವಾದ ಕೊಡುಗೆಯನ್ನು