Kollywood ಅಂತ ಕರೆಸಿಕೊಳ್ಳೋ ತಮಿಳು ಚಿತ್ರರಂಗದಲ್ಲಿ ಸಿ.ವಿ.ಕುಮಾರ್ ಅವರು, ನಿರ್ಮಾಪಕರಾಗಿ-ನಿರ್ದೇಶಕರಾಗಿ ಹೆಸರಾಗಿದ್ದಾರೆ. ಪಾ. ರಂಜಿತ್, ಕಾರ್ತಿಕ್ ಸುಬ್ಬರಾಜ್ ಹಾಗೂ ನಳನ್ ಕುಮಾರಸಾಮಿಯಂಥ ಪ್ರತಿಭಾನ್ವಿತ ನಿರ್ದೇಶಕರನ್ನು ತಮಿಳು ಚಿತ್ರರಂಗಕ್ಕೆ ಪರಿಚಯಿಸಿದ ಹೆಗ್ಗಳಿಕೆ ಸಿ.ವಿ. ಕುಮಾರ್ ಅವರದ್ದು.

ಕೊರೋನಾ ಕಾರಣದಿಂದ ಎಲ್ಲೆಡೆ ಚಿತ್ರಮಂದಿರಗಳು ಬಂದ್ ಆಗಿರೋ ಈ ಸನ್ನಿವೇಶದಲ್ಲಿ, ಸಿ.ವಿ. ಕುಮಾರ್, ತಮ್ಮ Regal Talkies ಓಪನ್ ಮಾಡ್ತಿದ್ದಾರೆ. ಹೌದು, ಇದೊಂಥರ ಹೊಸ ಟಾಕೀಸ್!. ಇದೂಕೂಡ OTT  ವೇದಿಕೆಗಳಾದ Netflix, Disney+Hotstar, Amazon Prime ರೀತಿಯಲ್ಲೇ Digital  ಮಾರ್ಗದಲ್ಲೇ ವೀಕ್ಷಕರನ್ನು ನೇರವಾಗಿ ತಲುಪುತ್ತದೆ. ಆದರೆ, ಇದು pay-per-view ಮಾದರಿಯ streaming platform ಆಗಿದೆ.

ಇದೇ ಜುಲೈ17ರಂದು ಶುಕ್ರವಾರ Regal Talkies ಅನ್ನುವ ಈ ಹೊಸ ವೇದಿಕೆ ಆರಂಭವಾಗಲಿದೆ. ಹಾಗಿದ್ರೆ, ಈಗಾಗಲೇ ಇರುವ OTT platformಗಳಿಗೂ Regal Talkiesಗೂ ಏನು ವ್ಯತ್ಯಾಸ ಅಂತ ನೋಡೋಣ. ಇತರೆ OTT ವೇದಿಕೆಗಳು ಸಾಮಾನ್ಯವಾಗಿ ತಮ್ಮ ಗ್ರಾಹಕರಿಂದ ಪ್ರತಿ ತಿಂಗಳ ಅಥವ ವಾರ್ಷಿಕ ಚಂದಾ ಪಡೆಯುತ್ತಾರೆ. ಆದರೆ, Regal Talkies ನಲ್ಲಿ ನೀವು ಯಾವ ಸಿನೆಮಾ ನೋಡುತ್ತೀರೋ ಅದಕ್ಕೆ ಮಾತ್ರ ಹಣ ಕೊಡುತ್ತೀರಿ. ಈ ರೀತಿ ವೀಕ್ಷಣೆ ಮಾಡುವ ಪ್ರತಿ ಸಿನೆಮಾ ಟಿಕೆಟ್ ಬೆಲೆ, ಕನಿಷ್ಟ 20 ರೂಪಾಯಿಗಳಿಂದ ಗರಿಷ್ಟ 100 ರೂಪಾಯಿ ಇರುತ್ತದೆ.

ಗ್ರಾಹಕರು ತಮ್ಮ Mobile Phoneಗಳಲ್ಲಷ್ಟೇ ಅಲ್ಲದೆ, Android TV ಅಥವ Apple TV ಮೂಲಕವೂ Regal Talkiesನಲ್ಲಿ ಸಿನೆಮಾ ವೀಕ್ಷಿಸಬಹುದು. ಈ ರೀಗಲ್ ಟಾಕೀಸಿನಲ್ಲಿ ಪ್ರದರ್ಶನಗೊಳ್ಳುವ ಸಿನೆಮಾಗಳು, ಸಾಮಾನ್ಯ ಸಿನೆಮಾ ಹಾಲ್ ಗಳು ಹಾಗೂ Multiplexಗಳಲ್ಲಿರುವಂತೆಯೇ, ಮೊದಲೇ ನಿಗದಿತವಾದ ಟೈಮ್ ಗೆ ಆರಂಭವಾಗುತ್ತವೆ. ಆದರೆ, ಇತರೆ OTT ವೇದಿಕೆಗಳಲ್ಲಿರುವಂತೆ, ನೀವು ನಿಮಗೆ ಬೇಕೆನ್ನಿಸಿದಾಗೆಲ್ಲ ಈ Regal Talkies ಸಿನೆಮಾವನ್ನು Pause ಮಾಡಿ ಎದ್ದುಹೋಗಲು ಅವಕಾಶವಿಲ್ಲ.

ಅದಕ್ಕಾಗಿ, ಸಿನೆಮಾದ ನಡುವೆ ಟಾಕೀಸಿನಲ್ಲಿ ಸಿಗುವ ರೀತಿಯಲ್ಲೇ ಮಧ್ಯಂತರ ವಿರಾಮ ಇರುತ್ತದೆ. ಇದರ ಜೊತೆಗೆ, Facebookನಲ್ಲಿರುವ WatchParty ರೀತಿಯಲ್ಲೇ, ನಿಮ್ಮ ಸ್ನೇಹಿತರೊಂದಿಗೆ ಒಟ್ಟಿಗೆ ಕುಳಿತು ಸಿನೆಮಾ ನೋಡುವ ಮತ್ತು ಪರಸ್ಪರ ಮಾತನಾಡಿಕೊಳ್ಳುವ group viewing ಸೌಲಭ್ಯವನ್ನೂ Regal Talkies ನಲ್ಲಿ ಕಲ್ಪಿಸುವ ಪ್ರಯತ್ನಗಳು ನಡೆಯುತ್ತಿವೆ.

ಸದ್ಯಕ್ಕೆ ತಮಿಳು ಸಿನೆಮಾಗಳ ಪ್ರದರ್ಶನದ ಮೂಲಕ ಆರಂಭವಾಗಲಿರುವ Regal Talkiesನಲ್ಲಿ, ದಕ್ಷಿಣ ಭಾರತದ ಎಲ್ಲ ಭಾಷೆಯ ಚಿತ್ರಗಳನ್ನೂ ನೋಡಲು ಸಿಗುವಂತೆ ಮಾಡುವುದು ಸಿ.ವಿ.ಕುಮಾರ್ ಅವರ ಉದ್ದೇಶ.

Pay-per-view ಅಂದ್ರೆ, ನೋಡಿದ್ದಕ್ಕಷ್ಟೇ ಕಾಸು, ಅನ್ನೋ ರೀಗಲ್ ಟಾಕೀಸ್ ನಲ್ಲಿ ಹೊಸ ಸಿನೆಮಾಗಳು ಮಾತ್ರವಲ್ಲದೆ, ಈ ಹಿಂದೆ ಥಿಯೇಟರ್ ಗಳಲ್ಲಿ ಬಿಡುಗಡೆಯಾಗಿದ್ದ ಸಿನೆಮಾಗಳನ್ನೂ ನೋಡಲು ಸಾಧ್ಯ.

ಆದರೆ, ಈ pay-per-view ರೀತಿಯ platform ನಿರ್ಮಾಣ ಮಾಡಲು ಸಿ.ವಿ.ಕುಮಾರ್, ಸಾಕಷ್ಟು ಸವಾಲುಗಳನ್ನೆದುರಿಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಇಂಟರ್ ನೆಟ್ Data cost. ಒಂದು ಸಿನೆಮಾ ನೋಡಲು, ನಿಮಗೆ 2 GB Data ಖರ್ಚಾದರೆ, ನಿಮಗೆ ಸಿನೆಮಾ ಒದಗಿಸುವ Websiteಗೂ ಅಷ್ಟೇ ಪ್ರಮಾಣದ ಡೇಟಾ ವೆಚ್ಚವಾಗುತ್ತದೆ. ರೀಗಲ್ ಟಾಕೀಸ್ ಬಳಸಿ 10 ಲಕ್ಷ ಜನ ಸಿನೆಮಾ ನೋಡುತ್ತಾರೆ ಎಂದುಕೊಂಡಲ್ಲಿ, ಎಷ್ಟು ಡೇಟಾ ಬೇಕಾಗುತ್ತದೆ ಯೋಚಿಸಿ.

ಇದರ ಜೊತೆಗೆ, ದೂರದ ಅಮೆರಿಕದಲ್ಲಿರುವವರು ರೀಗಲ್ ಟಾಕೀಸ್ ಮೂಲಕ ಸಿನೆಮಾ ನೋಡಲು ಕೂರುತ್ತಾರೆ ಅಂದ್ಕೊಳ್ಳಿ. ಭಾರತದಲ್ಲಿರುವ server ಮೂಲಕ ಆ ಸಿನೆಮಾ ವೀಕ್ಷಣೆ ಸಾಧ್ಯವಾಗುವಂತೆ ಮಾಡಲು CDN ಅಂದರೆ Content Delivery Network ಬಳಸಬೇಕು. ಈ CDN, ಹಲವಾರು Serverಗಳನ್ನು ಬಳಸಿ ದೂರದೇಶದಲ್ಲಿರುವವರೂ ಕೂಡ ಸಿನೆಮಾ ನೋಡುವುದನ್ನು ಸಾಧ್ಯವಾಗಿಸುತ್ತದೆ. ಈ ರೀತಿಯ CDN ಗಳ ನಿರ್ವಹಣೆ ಸಾಕಷ್ಟು ದುಬಾರಿ. ಇದಲ್ಲದೆ, 2 GB ಡೇಟ ಬಳಸುವ ಒಂದು ಸಿನೆಮಾ 4 serverಗಳನ್ನು ದಾಟಿ ವೀಕ್ಷಕನನ್ನು ತಲುಪುವ ಹೊತ್ತಿಗೆ 8 GB Data ಖರ್ಚಾಗಿರುತ್ತದೆ.

ಒಂದು Website ಏಕಕಾಲದಲ್ಲಿ ಎಷ್ಟು traffic ನಿಭಾಯಿಸಲು ಸಾಧ್ಯ ಅನ್ನುವುದು ಇಲ್ಲಿರುವ ಮತ್ತೊಂದು ಸವಾಲು. ಏಕೆಂದರೆ, ಸಾಮಾನ್ಯ Websiteಗಳನ್ನು ಕೇವಲ ನೂರಿನ್ನೂರು ಜನ ಒಂದೇ ಸಮಯದಲ್ಲಿ ಬಳಸಿದರೂ ಕೂಡ, ಅವು crash ಆಗುತ್ತವೆ. ಹೀಗಾಗಿ, ಸುಮಾರು ಐವತ್ತು ಸಾವಿರ ಜನ ಏಕಕಾಲಕ್ಕೆ ಬಳಸಬಹುದಾದ ಇಂಥ ಒಂದು App, Website ಮತ್ತು  Server ಹೆಚ್ಚಿನ bandwidth ಹೊಂದಿರಬೇಕಾಗುತ್ತದೆ.

ಅಮೆರಿಕದಂಥ ದೇಶದಲ್ಲಿ pay-per-view ರೀತಿಯ platformಗಳು ಸಾಕಷ್ಟಿವೆ. ಆದರೆ, ಇಂಥ ಪರಿಕಲ್ಪನೆಯನ್ನು ಭಾರತದಲ್ಲಿ ಯಾರೂ ಇಲ್ಲಿಯವರೆಗೆ ಬಳಸಿಲ್ಲ. ಸದ್ಯಕ್ಕೆ, ಕೊರೋನ ಹಾವಳಿಯಿರುವ ಈ ಸನ್ನಿವೇಶದಲ್ಲಿ, OTT ವೇದಿಕೆಗಳು ಸಾಕಷ್ಟು ಹೆಚ್ಚು ಜನರನ್ನು ತಲುಪುತ್ತಿವೆ. ಹೊಸ ಸಿನೆಮಾಗಳನ್ನು ಕೊಳ್ಳುವುದಕ್ಕೂ ಸೇರಿದಂತೆ, ತಮ್ಮ ಕಾರ್ಯನಿರ್ವಹಣೆಗಾಗಿ ಈ OTT ವೇದಿಕೆಗಳು ಸಾಕಷ್ಟು ದೊಡ್ಡ ಮಟ್ಟದ ಹಣ ಖರ್ಚು ಮಾಡುತ್ತಿವೆ. ಹೀಗಾಗಿ, ಲಕ್ಷ ಲಕ್ಷ ಸಂಖ್ಯೆಯ ಚಂದಾದಾರರನ್ನು ಗಳಿಸಿಕೊಂಡರಷ್ಚೇ ಇಂಥ OTT ಗಳು ಉಳಿಯಲು ಸಾಧ್ಯ.

Regal Talkiesನಲ್ಲಿ ತೋರಿಸಲಾಗುವ ಸಿನೆಮಾಗಳಿಂದ ದೊರೆಯುವ ಆದಾಯ ಹಂಚಿಕೆಗೆ, ಒಂದು ಹೊಸ ವಿಧಾನ ಅನುಸರಿಸಲಾಗುತ್ತಿದೆ. ಉದಾಹರಣೆಗೆ, ತನ್ನ ಸಿನೆಮಾವನ್ನು Regal Talkies ಮೂಲಕ ಪ್ರದರ್ಶಿಸಲು ಒಬ್ಬ ನಿರ್ಮಾಪಕ 100 ರೂಪಾಯಿ ನಿಗದಿ ಮಾಡುತ್ತಾನೆ ಎಂದುಕೊಳ್ಳೋಣ. ಇದರಲ್ಲಿ ಶೇ 20ರಷ್ಟು ಹಣವನ್ನು Regal Talkies ತನ್ನ ಸೇವಾ ವೆಚ್ಚವಾಗಿ ಪಡೆಯುತ್ತದೆ, ಉಳಿದ ಶೇ 80ರಷ್ಟು ಹಣ ಯಾವುದೇ ಕಡಿತವಿಲ್ಲದೆ ನೇರವಾಗಿ ನಿರ್ಮಾಪಕನಿಗೆ ತಲುಪುತ್ತದೆ.

ನಿರ್ಮಾಪಕ ಕುಮಾರ್ ಅವರ ಪ್ರಕಾರ, ಸಾಮಾನ್ಯವಾಗಿ ಥಿಯೇಟರ್ ಗಳಲ್ಲಿ ಬಿಡುಗಡೆಯಾದ ಒಂದು ಸಿನೆಮಾ ಒಂದುಕೋಟಿ ರೂಪಾಯಿ ವರಮಾನ ಗಳಿಸಿದೆ ಅಂದುಕೊಂಡರೆ, ಅದರಲ್ಲಿ 25 ರಿಂದ 30 ಲಕ್ಷ ರೂಪಾಯಿ ಮಾತ್ರ ನಿರ್ಮಾಪಕನ ಜೇಬು ತಲುಪುತ್ತದಂತೆ.

ಒಂದುವೇಳೆ ಯಾವುದಾದರೂ OTT ವೇದಿಕೆ ಆ ಸಿನೆಮಾವನ್ನು ಖರೀದಿಸಿದರೆ, ಪ್ರತಿ ವೀಕ್ಷಣೆಗೆ (per view) 7 ರಿಂದ 8 ರೂಪಾಯಿ ಸಿಗುತ್ತದೆ. ಆದರೆ, ಅದರಲ್ಲಿ ತೆರಿಗೆ ಮತ್ತು content curator ಪಡೆಯುವ ಶೇ 20 ಶುಲ್ಕವನ್ನು ಕಳೆದರೆ, ನಿರ್ಮಾಪಕನಿಗೆ ಸಿಗುವುದು ಕೇವಲ 5 ರೂಪಾಯಿ ಮಾತ್ರ. ಹೀಗಾಗಿ, ಒಂದು ಲಕ್ಷ ಜನರು OTT ಮೂಲಕ ಸಿನೆಮಾ ನೋಡಿದರೂ ಕೂಡ, ನಿರ್ಮಾಪಕನಿಗೆ ಸಿಗುವುದು 5 ಲಕ್ಷ ರೂಪಾಯಿ ಮಾತ್ರ.

ಅದೇ ಸಿನೆಮಾವನ್ನು Regal Talkiesನಲ್ಲಿ ತಲಾ 100 ರೂ. ಟಿಕೆಟ್ ದರದಲ್ಲಿ ಒಂದುಲಕ್ಷ ಜನ ನೋಡಿದಲ್ಲಿ ಆ ಸಿನೆಮಾದ ನಿರ್ಮಾಪಕನಿಗೆ 80 ಲಕ್ಷ ರೂಪಾಯಿ ಹಣ ಸಿಗುತ್ತದೆ. ಓಹ್, ಎಷ್ಟೊಂದು ದೊಡ್ಡ ವ್ಯತ್ಯಾಸ ಮತ್ತು ದೊಡ್ಡ ಲಾಭ. ನಿಜವಾಗಿಯೂ ಈ ಸುದ್ದಿ ಕೇಳುವ ನಿರ್ಮಾಪಕರಿಗೆ ಖೀರು ಕುಡಿದಷ್ಟು ಸಂತೋಷವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

Regal Talkies ಮೂಲಕ ವೀಕ್ಷಕರನ್ನು ತಲುಪುವ ಎಲ್ಲ ಸಿನೆಮಾಗಳ ಮಾಲೀಕತ್ವ ಅದರ ನಿರ್ಮಾಪಕರ ಬಳಿಯೇ ಇರುತ್ತದೆ. ಎಷ್ಟುಕಾಲ ಆ ಸಿನೆಮಾವನ್ನು Regal Talkies ನಲ್ಲಿಡಬೇಕು ಅನ್ನುವ ನಿರ್ಧಾರವೂ ಕೂಡ ನಿರ್ಮಾಪಕರದ್ದೇ ಆಗಿರುತ್ತದೆ. ಒಂದುವೇಳೆ ತಮ್ಮ ಸಿನೆಮಾ Regal Talkiesನಲ್ಲಿ ಓಡುವುದು ಸಾಕು ಎಂದು ನಿರ್ಮಾಪಕನಿಗೆ ಅನ್ನಿಸಿದಲ್ಲಿ, ಅದನ್ನು ಅಲ್ಲಿಂದ ತೆಗೆದು ತನಗೆ ಬೇಕಾದವರಿಗೆ ಕೊಡಲು ಅವನಿಗೆ ಪೂರ್ಣ ಸ್ವಾತಂತ್ರವಿರುತ್ತದೆ.

ಇವೆಲ್ಲ ಕಾರಣಗಳಿಂದಾಗಿ, ನಿರ್ಮಾಪಕ ಸಿ.ವಿ. ಕುಮಾರ್ ಅವರು ಆರಂಭಿಸುತ್ತಿರುವ Regal Talkies ಬಗ್ಗೆ ಸಿನೆಮಾ ರಂಗದಲ್ಲಿ ಸಾಕಷ್ಟು ಆಸಕ್ತಿ ಮತ್ತು ಕುತೂಹಲ ವ್ಯಕ್ತವಾಗಿದೆ. ಇಂಥ ಒಂದು pay-per-view ಸೌಲಭ್ಯ ಹೊಂದಿರುವ Regal Talkiesಗೆ ವೀಕ್ಷಕರು ಎಷ್ಟರ ಮಟ್ಟಿಗೆ ಲಗ್ಗೆಯಿಡಲಿದ್ದಾರೆ! ಅಲ್ಲಿ ತೋರಿಸುವ ಸಿನೆಮಾಗಳನ್ನು ಎಷ್ಟು ಜನರು ನೋಡಲಿದ್ದಾರೆ? ಇದು ಚಿತ್ರರಂಗದಲ್ಲಿ ಏನೆಲ್ಲ ಬದಲಾವಣೆಗೆ ಕಾರಣವಾಗಬಹುದು? ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರ ಪಡೆಯಲು ಕ್ಷಣಗಣನೆ ಇದೀಗ ಆರಂಭವಾಗಿದೆ. ಮಾಧ್ಯಮ ಅನೇಕ ಸಂಸ್ಥೆಯಿಂದಲೂ Regal Talkiesಗೆ All the best.