Communication Technology ಮತ್ತು Information Technology ಅನ್ನುವುದು ಇಂದಿನ ಜನಜೀವನದ ಬಹುತೇಕ ಎಲ್ಲ ಚಟುವಟಿಕೆಗಳಿಗೂ ಅನಿವಾರ್ಯ ಅಗತ್ಯವಾಗಿದೆ. ಎಷ್ಟರ ಮಟ್ಟಿಗೆ ಅಂದರೆ, ಇವತ್ತಿನ ಪುಟಾಣಿ ಮಕ್ಕಳು, ಮಾತಾಡುವುದು ಮತ್ತು ತಮ್ಮ ಕಾಲುಗಳ ಮೇಲೆ ನಿಂತು ನಡೆಯುವುದು ಹಾಗೂ ಮೊಬೈಲ್ ಫೋನ್ unlock ಮಾಡುವುದನ್ನು ಒಟ್ಟೊಟ್ಟಿಗೆ ಕಲಿಯುತ್ತಿದ್ದಾರೆ.

ಅನಿವಾರ್ಯವಾಯ್ತು Online Class

ಇತ್ತೀಚೆಗಂತೂ ಕೊರೊನಾ ಉಪಟಳದ ಕಾರಣದಿಂದ, ಮಕ್ಕಳಿಗೆ ಶಾಲೆಯೇ ಇಲ್ಲದಂತಾಗಿದೆ. ಹೀಗಾಗಿ, LKG ಮಕ್ಕಳೂ ಸೇರಿದಂತೆ ಎಲ್ಲರೂ ಕೂಡ, Online Class ಅಟೆಂಡ್ ಮಾಡುತ್ತಾ, ಪಾಠ ಕಲಿಯಬೇಕಾದಂಥ ಪರಿಸ್ಥಿತಿ ಬಂದಿದೆ. ಈ ಹೊಸ ಸನ್ನಿವೇಶ, ಬಹುತೇಕ ಎಲ್ಲ ಮಕ್ಕಳೂ ಕೂಡ, ಒಂದಲ್ಲ ಒಂದು digital deviceನ ಸಹವಾಸಕ್ಕೆ ಬರುವುದನ್ನು ಅನಿವಾರ್ಯವಾಗುವಂತೆ ಮಾಡಿದೆ.

OTT ಗಳ ರೊಟ್ಟಿ ಜಾರಿ ತುಪ್ಪದೊಳಕ್ಕೇ ಬಿತ್ತು

ಇಂಥ ಸನ್ನಿವೇಶದಲ್ಲಿ ತಮಗೆ ಸಿಗುತ್ತಿರುವ ಪ್ರಾಶಸ್ತ್ಯ, ಅವಕಾಶ ಮತ್ತು ಬೇಡಿಕೆಗಳಿಂದ ಈಗಾಗಲೇ ಸಾಕಷ್ಟು ಖುಷಿಯಾಗಿದ್ದ OTT ವೇದಿಕೆಗಳ ಪಾಲಿಗಂತೂ, ತಮ್ಮ ರೊಟ್ಟಿ ಜಾರಿ ತುಪ್ಪದೊಳಕ್ಕೇ ಬಿದ್ದಂತಾಗಿದೆ. ಹೀಗಾಗಿ, ಮಕ್ಕಳಿಗೆ ಅಗತ್ಯವಿರುವಂಥ ಮತ್ತು ಅವರನ್ನು ರಂಜಿಸುವಂಥ Edutainment content ಸೃಷ್ಟಿಸಲು ಮತ್ತು ಅವನ್ನು ಮಕ್ಕಳಿಗೆ ತಲುಪಿಸಲು OTT ವೇದಿಕೆಗಳು ಪೈಪೋಟಿ ನಡೆಸುತ್ತಿವೆ. Netflix ಮತ್ತು Prime Video ನವರು kids ವಿಶೇಷ ವಿಭಾಗ ಆರಂಭಿಸಿದ್ದಾರೆ, ಇನ್ನು ಹಲವಾರು OTT ಗಳು ಮಕ್ಕಳಿಗಾಗಿಯೇ ಮೀಸಲಾದ ಹೊಸ ವೇದಿಕೆಗಳನ್ನು ಆರಂಭಿಸಿವೆ.

Kids appಗಳಿಗೆ ಭಾರೀ Demand

YouTube Kids app ಇಲ್ಲಿಯವರೆಗೆ 10 ಕೋಟಿಗಿಂತಲೂ ಹೆಚ್ಚು ಬಾರಿ install ಆಗಿದೆ. ಅದೇ ರೀತಿ ChuChuTV Pro, ChuChuTV Lite ಮತ್ತು Voot Kids ಗಳು Google Play Store ನಿಂದ 10 ಲಕ್ಷಕ್ಕೂ ಹೆಚ್ಚು ಬಾರಿ install ಮಾಡಲ್ಪಟ್ಟಿವೆ. Voot Kids ನಲ್ಲಿ E-books, audio books ಮತ್ತು quiz ಗಳ ಜೊತೆಗೆ Nickelodeon TV ಚಾನಲ್ ಕೂಡ ನೋಡಬಹುದು. ಮೊದಲ ವಾರ ಉಚಿತವಾಗಿದ್ದು, ಚಂದಾ ದರ ತಿಂಗಳಿಗೆ 99 ರೂಗಳಿಂದ ಆರಂಭವಾಗುತ್ತದೆ. ಮೊದಲದಿನ ಮಾತ್ರ ಉಚಿತವಾಗಿರುವ Hungama Kidsನಲ್ಲಿ ತಿಂಗಳಿಗೆ ಕೇವಲ 30 ರೂಪಾಯಿ ದರದಲ್ಲಿ General knowledge,  ವಿಜ್ಞಾನ, ಗಣಿತ ಇತ್ಯಾದಿ ವಿಷಯಗಳ 2000 ನಿಮಿಷಗಳ ವರೆಗಿನ ವಿಡಿಯೋ ವೀಕ್ಷಿಸಬಹುದು.

ಮಕ್ಕಳಿಗೆ ಇದೇ ಚಟವಾಗಿಬಿಟ್ಟರೆ ಹೇಗೆ?

ಎಲ್ಲ ಕಡೆಯೂ ಶಾಲೆಗಳು ಮುಚ್ಚಿರುವಾಗ ಮತ್ತು ಹೊರಗೆ ಓಡಾಡುವುದೇ ಸುರಕ್ಷಿತವಲ್ಲದ ಈ ಸಮಯದಲ್ಲಿ, ಮಕ್ಕಳು OTT ವೇದಿಕೆಗಳ ಮೂಲಕ ಮಾಹಿತಿ, ಮನರಂಜನೆ ಪಡೆಯುವುದನ್ನು ಒಪ್ಪಬಹುದು. ಆದರೆ, ಮುಂದಿನ ದಿನಗಳ ಕತೆ ಏನು? ಮಕ್ಕಳು ಸಂಪೂರ್ಣವಾಗಿ Mobile Phone, Tab ಮತ್ತು Computer ಪರದೆಗಳನ್ನು ಬಿಟ್ಟು ಕದಲುವುದಿಲ್ಲ ಅನ್ನುವಂತಾದರೆ ಏನು ಮಾಡುವುದು?

ಏನೆಲ್ಲ ಪರಿಣಾಮಗಳಾಗಬಹುದು?

ಮಕ್ಕಳು ಪುಸ್ತಕ ಓದುವುದನ್ನು ಬಿಟ್ಟು, ಆಟವಾಡುವುದನ್ನೇ ಮರೆತು ‘Educational Video’ ಎಂದು ಕರೆಯಲ್ಪಡುವ ಬರೀ ಇಂಥವುಗಳಲ್ಲೇ ಮುಳುಗಿರುವಂಥ ಚಟ ಅಥವ ಗಿಳ್ಳು ಬೆಳೆಸಿಕೊಂಡುಬಿಟ್ಟರೆ ಹೇಗೆ? ಮುಂದೆ ಇವರನ್ನು ಅದರಿಂದ ಹೊರತರುವುದು ಸಾಧ್ಯವೇ? ಇದು, ಮಕ್ಕಳ ಮಾನಸಿಕ ಮತ್ತು ಶಾರೀರಿಕ ಬೆಳವಣಿಗೆಗಳ ಮೇಲೆ ಎಂಥ ಪರಿಣಾಮ ಬೀರುತ್ತದೆ? ಇತ್ಯಾದಿ ಹಲವಾರು ಪ್ರಶ್ನೆಗಳಿಗೆ ಪೋಷಕರು, ಶಿಕ್ಷಣ ತಜ್ಞರು ಮತ್ತು ಸಮಾಜ ವಿಜ್ಞಾನಿಗಳೆಲ್ಲರೂ ಸೇರಿ ಉತ್ತರ ಕಂಡುಕೊಳ್ಳಬೇಕಾಗುತ್ತದೆ.

OTT ಗಳೂ ಹೊಣೆಗಾರಿಕೆ ಪ್ರದರ್ಶಿಸಲಿ

ಸದ್ಯಕ್ಕೆ, ತಮ್ಮ ಜೀವಮಾನದ ಅತ್ಯುತ್ತಮ Batting Formನಲ್ಲಿದ್ದಂತೆ ಕಂಡುಬರುತ್ತಿರುವ OTT ವೇದಿಕೆಗಳವರು, Boundary ಮತ್ತು Sixer ಗಳನ್ನು ಚಚ್ಚುತ್ತಿದ್ದಾರೆ. ಈ ಖುಷಿಯನ್ನು ಆನಂದಿಸುವುದರ ಜೊತೆಗೆ, ಮಕ್ಕಳ ಭವಿಷ್ಯಕ್ಕೆ ಸಂಬಂಧಿಸಿದ ಈ ವಿಚಾರದಲ್ಲಿ, ಅವರೂ ಕೂಡ ಸಾಮಾಜಿಕ ಹೊಣೆಗಾರಿಕೆ ಪ್ರದರ್ಶಿಸಬೇಕಿದೆ.