ಕೋರೋನಾ ಮಹಿಮೆ-OTT ವೇದಿಕೆಗಳ ವಿಜೃಂಭಣೆ-ಚಿತ್ರೋದ್ಯಮದ ಚಿತ್ರಣವೇ ಬದಲು
ಕೋರೋನಾದಿಂದ ಉದ್ಭವವಾದ ಸನ್ನಿವೇಶದಲ್ಲಿ ಕಳೆದ 6 ತಿಂಗಳಿಗೂ ಹೆಚ್ಚು ಸಮಯದಿಂದ ದೇಶದ ಎಲ್ಲ ಥಿಯೇಟರ್ ಗಳೂ ಬಂದ್ ಆಗಿವೆ. ಹಿಂದೆಂದೂ ಕಾಣದಂಥ ಇಂಥ ಸಂದರ್ಭದಲ್ಲಿ, ನಿರ್ಮಾಣ ಪೂರ್ಣಗೊಂಡು ತೆರೆಗೆ ಬರುವುದಷ್ಟೇ ಬಾಕಿ ಇರುವ ಹೊಸ ಸಿನೆಮಾಗಳನ್ನು ಹಾಗೇ ಇರಿಸಿಕೊಂಡು, ಸಿನೆಮಾ ಹಾಲ್ ಗಳ ಬಾಗಿಲಿನ ಕಡೆ ನೋಡುತ್ತಾ ಕಾಲ ಹಾಕುವಂಥ ಪರಿಸ್ಥಿತಿ ನಿರ್ಮಾಣವಾಗಿತ್ತು. OTT ವೇದಿಕೆಗಳ ಮೆರೆದಾಟ ಇದನ್ನು ಮನಗಂಡ ದೇಶದ ಪ್ರಮುಖ OTT ವೇದಿಕೆಗಳು, ಸಿನೆಮಾ ಹಾಲ್ ಗಳು