ಭಾರತದಲ್ಲಿನ ಎಲ್ಲ ಚಿತ್ರಮಂದಿರಗಳು, Multiplexಗಳು ಬಾಗಿಲುಮುಚ್ಚಿ ನಾಲ್ಕು ತಿಂಗಳು ಕಳೆದಿವೆ. ಈ ಕೋರೊನಾದಿಂದ ದೇಶಕ್ಕೆ ಯಾವಾಗ ಮುಕ್ತಿ ಸಿಗುತ್ತದೆ, ಯಾವಾಗ ಜನ-ಜೀವನ ಸಂಪೂರ್ಣವಾಗಿ ಸಹಜ ಸ್ಥಿತಿಗೆ ಬರುತ್ತೆ ಅನ್ನುವುದು ಯಾರಿಗೂ ಗೊತ್ತಿಲ್ಲದ ವಿಚಾರ. ಹೀಗಿದ್ದರೂ, ಸಿನೆಮಾ ಪ್ರೇಮಿಗಳಿಗೆ OTT ವೇದಿಕೆಗಳ ಮೂಲಕ ಹೊಸ ಸಿನೆಮಾಗಳನ್ನು ಮನೆಯಿಂದಲೇ ನೋಡುವ ಅವಕಾಶ ಸಿಕ್ಕಿದೆ. ಆದ್ರೂ ಕೂಡ, ಮನೆಯಿಂದ ಹೊರಗೆ ಹೋಗಿ Cinema hall ಗಳಲ್ಲಿ Film ನೋಡೋ ಮಜಾನೇ ಬೇರೆ ಅನ್ನುವುದು, ಎಲ್ಲರೂ ಒಪ್ಪುವ ಮಾತು.

ಆದರೆ, ಸದ್ಯಕ್ಕಂತೂ ಸಿನೆಮಾ ಹಾಲ್ ಗಳು ಮತ್ತು Multiplexಗಳನ್ನು Open ಮಾಡೋಕ್ಕೆ ಅವಕಾಶ ಸಿಗೋ ಸಾಧ್ಯತೆ ತುಂಬಾ ಕಡಿಮೆ ಅನ್ನಬಹುದು. ಇಂಥಾ ಸಮಯದಲ್ಲೇ ಬೆಂಗಳೂರಿನಲ್ಲಿ Drive-in ಥಿಯೇಟರ್ ಆರಂಭವಾಗಿದೆ. ನಗರದ ಸರ್ಜಾಪುರ ರಸ್ತೆಯ SPT Sports Academyಯಲ್ಲಿ ಬೃಹತ್ ಪರದೆ ನಿರ್ಮಿಸಿ, ಸಿನೆಮಾ ನೋಡಲು Drive-in ಥಿಯೇಟರ್ ಸೌಲಭ್ಯ ಕಲ್ಪಿಸಲಾಗಿದೆ.

Drive-in ಥಿಯೇಟರ್ ಪರಿಕಲ್ಪನೆ

ಈ ಡ್ರೈವ್ ಇನ್ ಥಿಯೇಟರ್ ಅನ್ನೋ ಪರಿಕಲ್ಪನೆ ಭಾರತಕ್ಕಾಗಲಿ, ಜಗತ್ತಿಗಾಗಲಿ ಹೊಸದೇನೂ ಅಲ್ಲ. 1933ರಲ್ಲಿ ಅಮೆರಿಕದ New Jersey ಯಲ್ಲಿ Richard Hollingshead Jr ಎಂಬಾತ ವಿಶ್ವದ ಮೊಟ್ಟ ಮೊದಲ drive-in movie theater ಎಂದು ಕರೆಯಬಹುದಾದ ವ್ಯವಸ್ಥೆಯನ್ನು ಆರಂಭಿಸಿದ. ಅಮೆರಿಕ, ಇಂಗ್ಲೆಂಡ್, ಇಟಲಿ, ಕೊಲಂಬಿಯ, ಮಲೇಷಿಯ, ಬ್ರೆಜಿಲ್, ಬಹ್ರೇನ್, UAE ಸೇರಿದಂತೆ ಜಗತ್ತಿನ ಹಲವಾರು ದೇಶಗಳಲ್ಲಿ Drive-in ಥಿಯೇಟರ್ ಪರಿಕಲ್ಪನೆ ತುಂಬಾ ಜನಪ್ರಿಯವಾಗಿದೆ.  

ಭಾರತದಲ್ಲಿ Drive-in theatreಗಳು

ಭಾರತದಲ್ಲಿ ಮುಂಬೈ, ಅಹಮದಾಬಾದ್, ವಿಶಾಖಪಟ್ಟಣ ಮುಂತಾದ ನಗರಗಳಲ್ಲಿ drive-in theatreಗಳಿವೆ. 30 ವರ್ಷಗಳ ಹಿಂದೆಯೇ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿ Drive-in ಥಿಯೇಟರ್ ಇತ್ತು, ಕಾರಣಾಂತರಗಳಿಂದ ಅದು ಬಾಗಿಲು ಮುಚ್ಚಿದೆ.

ಹೇಗಿರುತ್ತೆ Drive-in theatre?

ಈ ಸಂದರ್ಭದಲ್ಲಿ ಈ Drive-in theatre ಅಥವ drive-in cinema ಅಂದರೆ ಏನು ಅನ್ನೋದನ್ನು ಒಂದಿಷ್ಟು ನೋಡೋಣ. ಮೈದಾನದಂಥ ಒಂದು ದೊಡ್ಡ ಬಯಲಿನಲ್ಲಿ ಒಂದು ದೊಡ್ಡ ಪರದೆ ಇರುತ್ತದೆ. ವೀಕ್ಷಕರು, ತಮ್ಮ ಕಾರುಗಳನ್ನು ನೇರವಾಗಿ ಅಲ್ಲಿಗೆ ಚಾಲನೆ ಮಾಡಿಕೊಂಡು ಬಂದು ನಿಲ್ಲಿಸುತ್ತಾರೆ. ಆ ನಂತರ, ತಮ್ಮ ತಮ್ಮ ವಾಹನಗಳಲ್ಲೇ ಆರಾಮವಾಗಿ ಕುಳಿತು ಅಥವ ಹೊರಗೆ ಕುಳಿತು-ನಿಂತು, ಸಾಕಷ್ಟು ದೂರದಿಂದಲೂ ಸ್ಪಷ್ಟವಾಗಿ ನೋಡಬಹುದಾದ ಪರದೆಯ ಮೇಲೆ ಸಿನೆಮಾ ವೀಕ್ಷಣೆ ಮಾಡುವುದೇ drive-in ಸೌಲಭ್ಯ.

ದೇಶ-ವಿದೇಶಗಳಲ್ಲಿನ ಕೆಲವು drive-in ಗಳು ಇಡೀ ಕುಟುಂಬ ಹೊರಗೆ ಕೂರಬಹುದಾದಂಥ picnic tableಗಳು ಮತ್ತು ಮಕ್ಕಳಿಗೆ ಆಟವಾಡುವ ಸ್ಥಳಗಳನ್ನೂ ಹೊಂದಿರುತ್ತವೆ. ಬಹುತೇಕ drive-in ಗಳಲ್ಲಿ ಊಟ, ತಿಂಡಿ, ತಿನಿಸು ಮತ್ತು ಪಾನೀಯಗಳನ್ನೂ ಪೂರೈಕೆ ಮಾಡಲಾಗುತ್ತದೆ.

ಒಂದೆರಡು ದಶಕಗಳ ಹಿಂದೆ, ಬಿಳಿ ಬಣ್ಣ ಬಳಿದಿರುವ ದೊಡ್ಡ ಗೋಡೆಯೇ drive-in ಸಿನೆಮಾದ ಪರದೆಯಾಗಿರುತ್ತಿತ್ತು. ಇತ್ತೀಚಿನ ದಿನಗಳಲ್ಲಿ, steel ನಿಂದ  ನಿರ್ಮಿಸಿರುವ ಬೃಹತ್ ರಚನೆಯನ್ನು ಪರದೆಯಾಗಿ ಬಳಸಲಾಗುತ್ತಿದೆ. ಕೆಲವು ವರ್ಷಗಳ ಹಿಂದೆ, ಸಿನೆಮಾದ sound ಕೇಳಿಸಲು, ಪರದೆ ಬಳಿಯಲ್ಲೇ ಸ್ಪೀಕರ್ ಗಳನ್ನು ಇರಿಸಲಾಗುತ್ತಿತ್ತು. ಆ ನಂತರ wire ಗಳ ಮೂಲಕ ಸಂಪರ್ಕ ಹೊಂದಿದ್ದ ಪ್ರತ್ಯೇಕ Speakerಗಳನ್ನು ಅಲ್ಲಿರುವ ಪ್ರತಿಯೊಂದು ವಾಹನಗಳಿಗೂ ತೂಗು ಹಾಕಲಾಗುತ್ತಿತ್ತು.  ತಂತ್ರಜ್ಞಾನದಲ್ಲಿ ದೊಡ್ಡ ಸುಧಾರಣೆಯಾಗಿರುವ ಇತ್ತೀಚಿನ ವರ್ಷಗಳಲ್ಲಿ, Appಗಳ ಮೂಲಕ ನೇರವಾಗಿ ಕಾರುಗಳ stereo system ನಲ್ಲೇ ಸಿನೆಮಾದ ಧ್ವನಿ ಕೇಳಿಸುವಂಥ ವ್ಯವಸ್ಥೆ ಮಾಡಲಾಗಿದೆ. ಇದು drive-in ಥಿಯೇಟರ್ ಗಳಲ್ಲಿನ ಧ್ವನಿಯ ಗುಣಮಟ್ಟವನ್ನು ಹಲವುಪಟ್ಟು ಹೆಚ್ಚಿಸಿದೆ.

ಸಣ್ಣ ಸಂತೋಷ ಕೊಡಬಹುದಾದ drive-in ಸಿನೆಮಾ

ಎಲ್ಲರನ್ನೂ ಮನೆಯಲ್ಲೇ ಕಟ್ಟಿ ಹಾಕಿದಂಥ ಈ ಸನ್ನಿವೇಶದಲ್ಲಿ, ಜನರು Drive-in theatreಗಳಿಗೆ ಬರುವ ಮೂಲಕ ಒಂದು ಸಣ್ಣ ಮಟ್ಟದ ಸಂತೋಷವನ್ನಾದರೂ ಅನುಭವಿಸಬಹುದು. ಆ ಮೂಲಕ, ತಮ್ಮನ್ನು ಕಾಡುತ್ತಿರುವ ಮನರಂಜನೆಯ ಕೊರತೆ ಮನೋಭಾವ ನೀಗಿಸಿಕೊಳ್ಳಬಹುದು. ಆದರೆ, ಕೊರೋನಾ ಹಾವಳಿಯ ಈ ಸನ್ನಿವೇಶದಲ್ಲಿ ಬೆಂಗಳೂರಾಗಲಿ ಅಥವ ಬೇರೆ ನಗರಗಳಲ್ಲಾಗಲಿ ಇರುವ Drive-in theatreಗಳಲ್ಲಿ ವೀಕ್ಷಕರ ಸುರಕ್ಷತೆಗಾಗಿ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯ. ಹೀಗಾಗಿ, Drive-in ಆಗುವ ಕಾರುಗಳ ಸಂಖ್ಯೆಯನ್ನು ಮಿತಿಗೊಳಿಸಬೇಕು ಹಾಗೂ ಒಂದು ಕಾರು ಮತ್ತು ಮತ್ತೊಂದು ಕಾರಿನ ನಡುವೆ ಸಾಕಷ್ಟು ಅಂತರ ಕಾಪಾಡಿಕೊಳ್ಳಬೇಕು. ಇಷ್ಟು ಮಾತ್ರವಲ್ಲದೆ, ಒಂದು ಕಾರಿನಲ್ಲಿ ಮೂರರಿಂದ ನಾಲ್ಕು ಜನರಷ್ಟೇ ಕೂರುವಂತೆ ನೋಡಿಕೊಳ್ಳಬೇಕಿದೆ. Drive-in theatreಗೆ ಬರುವ ವೀಕ್ಷಕರ ಅನುಕೂಲಕ್ಕಾಗಿ ಸ್ವಚ್ಛ ಶೌಚಾಲಯಗಳು ಹಾಗೂ sanitizer ಬಳಕೆ ವ್ಯವಸ್ಥೆ ಇರಬೇಕು. ಒಂದುವೇಳೆ ತಿಂಡಿ-ತಿನಿಸುಗಳ ಮಾರಾಟ ಮಾಡುವುದಾದರೆ, ಅಲ್ಲೂ ಕೂಡ ಹೆಚ್ಚಿನ ಸುರಕ್ಷತೆಗೆ ಒತ್ತು ನೀಡಬೇಕಾಗಿದೆ.

ಒಟ್ಟಿನಲ್ಲಿ, ‘’ಪ್ರತಿಯೊಂದು ಸಮಸ್ಯೆಯೂ ಕೂಡ, ಪರಿಹಾರ ಕಂಡುಕೊಳ್ಳಲು ಕಾರಣವಾಗುವ ಪ್ರೇರಣೆ’’ ಅನ್ನುವ ಮಾತು, ಕೊರೋನ ಸಂದರ್ಭದಲ್ಲಂತೂ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ.