ಹಾಡು ಎಂಬುದರ ಮೂರ್ತ ರೂಪ, ಸಿರಿಗಂಧ ಚೆಲ್ಲುವ ದಿಗ್ಗಜ ಕಣ್ಮರೆಯಾಯ್ತು. ಕಳೆದ ಕೆಲವು ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿ ಚೆನ್ನೈನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾನ ಗಂಧರ್ವ… ಪದ್ಮ ವಿಭೂಷಣ, ಭಾರತ ಚಿತ್ರರಂಗದ ಹಿನ್ನೆಲೆ ಗಾಯನ ಕ್ಷೇತ್ರದ ದಿಗ್ಗಜ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಮ್ ಅಸ್ತಂಗತರಾಗಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲೆಯಾಳಮ್, ಹಿಂದಿ ಸೇರಿದಂತೆ 15ಕ್ಕೂ ಹೆಚ್ಚು ಭಾಷೆಗಳಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ ಬಾಲಸುಬ್ರಹ್ಮಣ್ಯಮ್ ತಮ್ಮ 74ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಎಸ್ಪಿಬಿ ಅವರು ಚೇತರಿಸಕೊಳ್ಳಬೇಕು ಮತ್ತೆ ನಮ್ಮೆದುರು ಹಾಡಬೇಕು ಎಂಬ ಕೋಟ್ಯಂತರ ಸಂಗೀತ ಪ್ರೇಮಿಗಳ ಪ್ರಾರ್ಥನೆ ನಿಷ್ಫಲವಾಗಿದೆ. ಆದರೆ, ಎಸ್ಪಿಬಿ ಅವರು ನಮ್ಮನ್ನು ದೈಹಿಕವಾಗಿ ಅಗಲಿದರೂ ಕೂಡ, ತಮ್ಮ ಧ್ವನಿ, ಚಿಂತನೆಗಳು ಹಾಗೂ ಸಾವಿರಾರು ಸುಶ್ರಾವ್ಯ ಗೀತೆಗಳ ಸ್ವರೂಪದಲ್ಲಿ ಯಾವತ್ತಿಗೂ ಅಮರರಾಗಿ ಉಳಿಯುತ್ತಾರೆ. ಮಾಧ್ಯಮ ಅನೇಕ ಸಂಸ್ಥೆ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಮ್ ಅವರಿಗೆ ನಮನಗಳನ್ನು ಸಲ್ಲಿಸುವ ಮೂಲಕ ಶ್ರದ್ಧಾಂಜಲಿ ಅರ್ಪಿಸುತ್ತಿದೆ.

Feature Image Courtesy : Sachin Sacz Photography